Champions Trophy 2025: 'ಇದೇನು ನಮ್ಮ ತವರಲ್ಲ..'; ಭಾರತಕ್ಕೆ Advantage ಎಂಬ ಟೀಕೆಗಳಿಗೆ ನಾಯಕ Rohit Sharma ಖಡಕ್ ತಿರುಗೇಟು!
ಭಾರತ ದುಬೈ ಪಿಚ್ ನ ಅಡ್ವಾಂಟೇಜ್ ಪಡೆಯುತ್ತಿದೆ ಎಂಬ ಟೀಕೆಗಳಿಗೆ ಖಡಕ್ ಉತ್ತರ ನೀಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 'ಇದೇನು ನಮ್ಮ ಮನೆಯಲ್ಲ..' ಎಂದು ಖಾರವಾಗಿ ಹೇಳಿದ್ದಾರೆ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ದುಬೈ ಪಿಚ್ ನ ಅಡ್ವಾಂಟೇಜ್ ಪಡೆಯುತ್ತಿದೆ ಎಂಬ ಟೀಕೆಗಳಿಗೆ ಖಡಕ್ ಉತ್ತರ ನೀಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 'ಇದೇನು ನಮ್ಮ ಮನೆಯಲ್ಲ..' ಎಂದು ಖಾರವಾಗಿ ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ರೋಹಿತ್ ಶರ್ಮಾ, 'ದುಬೈ ನಮ್ಮ ಮನೆಯಲ್ಲ, ಪಿಚ್ ಬಗ್ಗೆ ನಮಗೂ ಗೊತ್ತಿಲ್ಲ. ಈ ಪಿಚ್‌ಗಳಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ, ಸೆಮಿಫೈನಲ್‌ನಲ್ಲಿ ಯಾವ ಪಿಚ್ ಬಳಸಲಾಗುವುದು ಎಂದು ನಮಗೆ ತಿಳಿದಿಲ್ಲ, ಆದರೆ ಅದೇನೇ ಇದ್ದರೂ, ನಾವು ಅದಕ್ಕೆ ಹೊಂದಿಕೊಳ್ಳುತ್ತೇವೆ. ಇದು ನಮ್ಮ ತವರು ಮೈದಾನ ಅಲ್ಲ, ಇದು ದುಬೈ. ನಾವು ಇಲ್ಲಿ ಹೆಚ್ಚು ಪಂದ್ಯಗಳನ್ನು ಆಡುವುದಿಲ್ಲ, ಇದು ನಮಗೆ ಹೊಸದು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
"ನಮ್ಮ ತಂಡ ಆಡಿದ 3 ಪಂದ್ಯಗಳಲ್ಲಿ ಮೇಲ್ಮೈ ಸ್ವರೂಪ ಒಂದೇ ಆಗಿತ್ತು, ಆದರೆ ಎಲ್ಲಾ ಪಂದ್ಯಗಳಲ್ಲಿ ಪಿಚ್ ವಿಭಿನ್ನವಾಗಿ ವರ್ತಿಸಿತು. ನ್ಯೂಜಿಲೆಂಡ್ ವಿರುದ್ಧ, ಅವರ ವೇಗದ ಬೌಲರ್‌ಗಳು ಚೆಂಡನ್ನು ಸ್ವಿಂಗ್ ಮಾಡಿದಾಗ ಮತ್ತು ಸೀಮ್ ಮಾಡಿದಾಗ ನಾವು ಬದಲಾವಣೆ ನೋಡಿದ್ದೇವೆ. ಹಿಂದಿನ ಎರಡೂ ಪಂದ್ಯಗಳಲ್ಲಿ, ನಮ್ಮ ಬೌಲರ್‌ಗಳು ಮೊದಲು ಬೌಲಿಂಗ್ ಮಾಡಿದರು. ಆದರೆ ಮುಂದಿನ ಪಂದ್ಯದಲ್ಲಿ ನಾವು ಅದನ್ನು ನೋಡಲಿಲ್ಲ. ಪ್ರತಿ ವಿಕೆಟ್ ಹೇಗೆ ವರ್ತಿಸುತ್ತದೆ ಎಂದು ನಮಗೆ ತಿಳಿದಿಲ್ಲ. ಅವರು ಒಂದೇ ರೀತಿ ಕಾಣುತ್ತದೆ. ಆದರೆ ನೀವು ಆಡುವಾಗ ಅದು ವಿಭಿನ್ನವಾಗಿ ವರ್ತಿಸುತ್ತದೆ. ಒಬ್ಬ ಬ್ಯಾಟ್ಸ್‌ಮನ್, ನಾವು ಯಾವ ಹೊಡೆತಗಳನ್ನು ಆಡಬಹುದು ಮತ್ತು ಯಾವ ಶಾಟ್ ಸಾಧ್ಯವಿಲ್ಲ ಎಂದು ನಾವು ಯೋಚಿಸಬೇಕು. ಬೌಲರ್‌ಗಳು ಸಹ ಹೊಂದಾಣಿಕೆ ಮಾಡಿಕೊಳ್ಳಬೇಕು" ಎಂದು ರೋಹಿತ್ ಶರ್ಮಾ ಹೇಳಿದರು.
ಏನಿದು ಚರ್ಚೆ?
ಅಂದಹಾಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯ ಮಂಗಳವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ರಾಜಕೀಯ ಕಾರಣಗಳಿಂದಾಗಿ ಭಾರತ ಪಾಕಿಸ್ತಾನ ಆಯೋಜಿಸಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಗೆ ದುಬೈ ಅನ್ನು ನ್ಯೂಟ್ರಲ್ ವೆನ್ಯು ಆಗಿ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಭಾರತದ ಎಲ್ಲ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ. ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯ ಮಂಗಳವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಒಂದು ವೇಳೆ ಭಾರತ ಫೈನಲ್ ಗೇರಿದರೆ ಫೈನಲ್ ಪಂದ್ಯ ಕೂಡ ಪಾಕಿಸ್ತಾನದಿಂದ ದುಬೈಗೆ ಬದಲಾಗುತ್ತದೆ.
ಟೀಕೆ
ಚಾಂಪಿಯನ್ಸ್ ಟ್ರೋಫಿ 2025ರ ಆತಿಥೇಯ ಪಾಕಿಸ್ತಾನ. ಆದರೆ, ಭದ್ರತಾ ಕಾರಣಗಳಿಂದಾಗಿ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿತ್ತು. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ ಎಂದು ನಿರ್ಧರಿಸಲಾಯಿತು. ಆತಿಥೇಯ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಆಡಲು ದುಬೈಗೆ ಬರಬೇಕಿತ್ತು. ಅನೇಕ ಜನರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ, ಅವರ ಪ್ರಕಾರ ಇತರ ತಂಡಗಳು ವಿವಿಧ ಮೈದಾನಗಳಲ್ಲಿ ಆಡುತ್ತಿವೆ. ಆದರೆ ಭಾರತ ಮಾತ್ರ ಒಂದೇ ಮೈದಾನದಲ್ಲಿ ಆಡುತ್ತಿದೆ. ಟೂರ್ನಿಯ ವೇಳೆ ಟೀಂ ಇಂಡಿಯಾ ಒಂದು ಮೈದಾನದಲ್ಲಿ ಆಡಬೇಕಾದರೆ ಪ್ರಯಾಣಿಸಬೇಕಿಲ್ಲ. ಇತರ ತಂಡಗಳು ಪಾಕಿಸ್ತಾನ ಮತ್ತು ದುಬೈ ನಡುವೆ ಪ್ರಯಾಣಿಸುತ್ತವೆ. ಇದು ಭಾರತಕ್ಕೆ ತಂಡಕ್ಕೆ ಆಗುತ್ತಿರುವ ಲಾಭ ಎಂದು ಟೀಕಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



