India vs England: ಇಂಗ್ಲೆಂಡ್‌ಗೆ 608 ರನ್ ಬೃಹತ್ ಗುರಿ ನೀಡಿದ ಭಾರತ; ದಾಖಲೆ ಬರೆದ ಗಿಲ್ ಶತಕ!
ನಾಯಕ ಶುಭಮನ್ ಗಿಲ್ ಶತಕ, ರಿಷಭ್ ಪಂತ್ ಹಾಗೂ ಕೆ.ಎಲ್ ರಾಹುಲ್ ಅರ್ಧಶತಕಗಳ ನೆರವಿನಿಂದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಇಂಗ್ಲೆಂಡ್: ನಾಯಕ ಶುಭಮನ್ ಗಿಲ್ ಶತಕ, ರಿಷಭ್ ಪಂತ್ ಹಾಗೂ ಕೆ.ಎಲ್ ರಾಹುಲ್ ಅರ್ಧಶತಕಗಳ ನೆರವಿನಿಂದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.
ತನ್ನ 2ನೇ ಇನ್ನಿಂಗ್ಸ್ ನಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿ 244 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. 4ನೇ ದಿನ ಆಂಗ್ಲರ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಭಾರತ ತಂಡ 6 ವಿಕೆಟ್ ನಷ್ಟಕೆ 427 ರನ್ ಗಳಿಸಿ, ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.
ತನ್ನ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ಶುಭಮನ್ ಗಿಲ್ 161 ರನ್ (162 ಎಸೆತ, 8 ಸಿಕ್ಸರ್, 13 ಬೌಂಡರಿ) ಗಳಿಸಿದರೆ, ರಿಷಭ್ ಪಂತ್ 65 ರನ್, ರವೀಂದ್ರ ಜಡೇಜಾ ಅಜೇಯ 69 ರನ್, ಕೆ.ಎಲ್ ರಾಹುಲ್ 55 ರನ್, ಜೈಸ್ವಾಲ್ 28 ರನ್, ಕರುಣ್ ನಾಯರ್ 26 ರನ್, ನಿತೀಶ್ ರೆಡ್ಡಿ 1 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 12 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ದಾಖಲೆ ಬರೆದ ಶುಭ್ಮನ್ ಗಿಲ್ ಶತಕ
ಗಿಲ್ ಅವರ 369 ರನ್‌ಗಳ ಪಂದ್ಯದ ಮೊತ್ತವು ಟೆಸ್ಟ್‌ನಲ್ಲಿ ಭಾರತೀಯ ಆಟಗಾರ ಗಳಿಸಿದ ಅತಿ ಹೆಚ್ಚು ರನ್‌ಗಳ ಹೊಸ ದಾಖಲೆಯನ್ನು ನಿರ್ಮಿಸಿದೆ. 1971 ರಲ್ಲಿ ಪೋರ್ಟ್-ಆಫ್-ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗವಾಸ್ಕರ್ ಅವರ 344 ರನ್‌ಗಳ ದಾಖಲೆಯನ್ನು ಮುರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



