ಕ್ರಿಕೆಟ್

WPL 2025: 90* ರನ್ ಸಿಡಿಸಿ ಮತ್ತೆ ಮಿಂಚಿದ ಎಲ್ಲಿಸ್ ಪೆರ್ರಿ: ಯುಪಿಗೆ 182 ರನ್ ಗುರಿ ನೀಡಿದ RCB

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ ಅರ್ಧಶತಕ ಸಿಡಿಸಿದ್ದು ತಂಡ ಬೃಹತ್ ಮೊತ್ತ ಕಲೆಹಾಕಿದೆ.

WPL 2025: 90* ರನ್ ಸಿಡಿಸಿ ಮತ್ತೆ ಮಿಂಚಿದ ಎಲ್ಲಿಸ್ ಪೆರ್ರಿ: ಯುಪಿಗೆ 182 ರನ್ ಗುರಿ ನೀಡಿದ RCB
ಎಲ್ಲಿಸ್ ಪೆರ್ರಿ
Published On :

ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಉತ್ತರ ಪ್ರದೇಶ ಮಹಿಳಾ ತಂಡದ ವಿರುದ್ಧ ಆರ್ ಸಿಬಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 181 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ ಅರ್ಧಶತಕ ಸಿಡಿಸಿದ್ದು ತಂಡ ಬೃಹತ್ ಮೊತ್ತ ಕಲೆಹಾಕಿದೆ. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ 6 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ 94 ರನ್ ಗಳ ಜೊತೆಯಾಟವಾಡಿದರು. ಡ್ಯಾನಿ 57 ರನ್ ಗಳಿಸಿ ಔಟಾದರು. ಆದರೆ ಎಲ್ಲಿಸ್ ಪೆರ್ರಿ 55 ಎಸೆತಗಳಲ್ಲಿ 3 ಸಿಕ್ಸರ್ 9 ಬೌಂಡರಿ ಸೇರಿದಂತೆ ಅಜೇಯ 90 ರನ್ ಕಲೆಹಾಕಿದರು.

ಉತ್ತರ ಪ್ರದೇಶ ವಾರಿಯರ್ಸ್ ಪರ ಬೌಲಿಂಗ್ ನಲ್ಲಿ ಹೆನ್ರಿ, ದೀಪ್ತಿ ಶರ್ಮಾ ಮತ್ತು ತಹ್ಲಿಯಾ ಮೆಕ್‌ಗ್ರಾತ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.