ಕ್ರಿಕೆಟ್

IPL: Rajasthan Royals ಜೊತೆಗಿನ ಪಯಣ ಅದ್ಭುತವಾಗಿತ್ತು... ಆದರೆ..; ತಂಡ ತೊರೆಯುವ ಸೂಚನೆ ನೀಡಿದ Sanju Samson?

ಆ ಸಮಯದಲ್ಲಿ ಅವರು ನನ್ನ ಮೇಲೆ ನಂಬಿಕೆ ಇಟ್ಟರು. ನನ್ನ ಪಯಣದುದ್ದಕ್ಕೂ ಪ್ರೋತ್ಸಾಹಿಸಿದರು. ಅವರಿಗೆ ನಾನು ಆಭಾರಿಯಾಗಿರುವೆ. ಅದಕ್ಕಾಗಿಯೇ ಈ ಫ್ರ್ಯಾಂಚೈಸಿಯು ನನಗೆ ಬಹಳಷ್ಟು ಆಪ್ತವಾಗಿದೆ...

IPL: Rajasthan Royals ಜೊತೆಗಿನ ಪಯಣ ಅದ್ಭುತವಾಗಿತ್ತು... ಆದರೆ..; ತಂಡ ತೊರೆಯುವ ಸೂಚನೆ ನೀಡಿದ Sanju Samson?
ಸಂಜು ಸ್ಯಾಮ್ಸನ್
Published On :

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಹರಾಜು ಪ್ರಕ್ರಿಯೆಗೆ ತಂಡಗಳ ಸಿದ್ಧತೆ ನಡೆದಿರುವಂತೆಯೇ ರಾಜಸ್ತಾನ ರಾಯಲ್ಸ್ ತಂಡದಿಂದ ನಾಯಕ ಸಂಜು ಸ್ಯಾಮ್ಸನ್ ಹೊರಬರುವ ಕುರಿತ ಸುದ್ದಿಗಳು ವ್ಯಾಪಕವಾಗ ತೊಡಗಿದೆ.

ಹೌದು.. ರಾಜಸ್ಥಾನ ರಾಯಲ್ಸ್ ತಂಡವನ್ನು ವಿಕೆಟ್‌ಕೀಪರ್–ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ತೊರೆಯಲಿದ್ದಾರೆಂಬ ಊಹಾಪೋಹಗಳು ಕೇಳಿಬರುತ್ತಿದೆ. ಸ್ವತಃ ಸಂಜು ಅವರೇ ತಮ್ಮನ್ನು ತಂಡದಿಂದ ಬಿಡುಗಡೆ ಮಾಡುವಂತೆ ಫ್ರ್ಯಾಂಚೈಸಿಗೆ ಮನವಿ ಮಾಡಿದ್ದಾರೆಂದೂ ಹೇಳಲಾಗುತ್ತಿದೆ. ಸಂಜು ಸ್ಯಾಮ್ಸನ್ 2013ರಿಂದಲೂ ರಾಜಸ್ತಾನ ತಂಡದ ಸದಸ್ಯರಾಗಿದ್ದು, ಕಳೆದ ಟೂರ್ನಿಯಲ್ಲಿ ಅವರು ತಂಡದ ನಾಯಕತ್ವ ಕೂಡ ವಹಿಸಿದ್ದರು.

ರಾಜಸ್ತಾನ ತಂಡಕ್ಕೆ ಕೈಕೊಟ್ಟು, ಸಿಎಸ್ ಕೆ ಬಣದತ್ತ ಸಂಜು ಸ್ಯಾಮ್ಸನ್ ಗಮನ ಹರಿಸಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಭಾರತ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಅವರ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ಕೂಡ ವ್ಯಾಪಕ ವೈರಲ್ ಆಗುತ್ತಿದೆ.

ಇಷ್ಟಕ್ಕೂ ಸಂಜು ಸ್ಯಾಮ್ಸನ್ ಹೇಳಿದ್ದೇನು?

‘ರಾಜಸ್ಥಾನ ರಾಯಲ್ಸ್ ತಂಡವು ನನ್ನ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ಕೇರಳದ ಸಣ್ಣ ಹಳ್ಳಿಯೊಂದರಿಂದ ಬಂದ ನಾನು ಪ್ರತಿಭೆ ತೋರಿಸುವ ತವಕದಲ್ಲಿದ್ದೆ. ರಾಹುಲ್ (ದ್ರಾವಿಡ್) ಸರ್ ಮತ್ತು ಮನೋಜ್ ಬದಳೆ ಸರ್ ಅವರು ಪ್ರತಿಭೆ ಗುರುತಿಸಿದರು. ಜಗದ ಮುಂದೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಒದಗಿಸಿಕೊಟ್ಟರು’ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಅಂತೆಯೇ ‘ಆ ಸಮಯದಲ್ಲಿ ಅವರು ನನ್ನ ಮೇಲೆ ನಂಬಿಕೆ ಇಟ್ಟರು. ನನ್ನ ಪಯಣದುದ್ದಕ್ಕೂ ಪ್ರೋತ್ಸಾಹಿಸಿದರು. ಅವರಿಗೆ ನಾನು ಆಭಾರಿಯಾಗಿರುವೆ. ಅದಕ್ಕಾಗಿಯೇ ಈ ಫ್ರ್ಯಾಂಚೈಸಿಯು ನನಗೆ ಬಹಳಷ್ಟು ಆಪ್ತವಾಗಿದೆ’ ಎಂದರು.

ಟಿ20 ವಿಶ್ವಕಪ್ (2024) ಟೂರ್ನಿಯ ನಂತರ ಮಹತ್ವದ ಬದಲಾವಣೆಯಾಯಿತು. ಗೌತಮ್ (ಗಂಭೀರ್) ಅವರು ಬಂದರು ಮತ್ತು ಸೂರ್ಯ (ಯಾದವ್) ನಾಯಕರಾಗಿ ನೇಮಕವಾದರು. ಆ ಹೊತ್ತಿನಲ್ಲಿ ನಾವು ಆಂದ್ರದಲ್ಲಿ ನಡೆಯುತ್ತಿದ್ದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದೆ. ಇನ್ನೊಂದು ತಂಡದಲ್ಲಿ ಸೂರ್ಯ ಕೂಡ ಅಲ್ಲಿ ಆಡುತ್ತಿದ್ದರು. ಆಗ ಅವರು ನನ್ನ ಬಳಿ ಬಂದು ಒಳ್ಳೆಯ ಅವಕಾಶವೊಂದು ಸಿಗುತ್ತಿದ್ದೆ. ಏಳು ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಿದ್ದೇವೆ. ಎಲ್ಲ ಪಂದ್ಯಗಳಲ್ಲಿಯೂ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಕೊಡುವೆ ಚೆನ್ನಾಗಿ ಆಡು ಅಂದಿದ್ದರು’ ಎಂದು ಸಂಜು ನೆನಪಿಸಿಕೊಂಡರು.

‘ನಾಯಕನ ವಿಶ್ವಾಸದ ನುಡಿಗಳು ನನ್ನಲ್ಲಿ ಪುಳಕ ಮೂಡಿಸಿದ್ದವು. ಶ್ರೀಲಂಕಾದಲ್ಲಿ ಎರಡು ಪಂದ್ಯಗಳಲ್ಲಿ ಆಡಿದೆ. ಆದರೆ ಅಲ್ಲಿ ಹೆಚ್ಚು ರನ್ ಗಳಿಸಲಿಲ್ಲ. ಡ್ರೆಸಿಂಗ್ ರೂಮ್‌ನಲ್ಲಿ ಬೇಸರದಿಂದ ಕುಳಿತಾಗ ಗೌತಮ್ ಭಾಯ್ (ಗಂಭೀರ್) ನನ್ನ ಬಳಿ ಬಂದು ಏನಾಯಿತೆಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನಾನು ಬಹಳ ದಿನಗಳ ನಂತರ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಲಭಿಸಿದೆ.

ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ವಿಫಲನಾದೆ ಎಂದೆ. ಅದಕ್ಕೆ ಅವರು, ನೀನು 21 ಡಕ್ (ಸೊನ್ನೆ) ಗಳಿಸಿದರೆ ಮಾತ್ರ ತಂಡದಿಂದ ಕೈಬಿಡುವೆಯೆಂದರು. ಆ ಪದಗಳು ನನ್ನಲ್ಲಿ ಹೊಸ ವಿಶ್ವಾಸ ಮೂಡಿಸಿದವು. ಕೋಚ್ ಮತ್ತು ನಾಯಕ ಈ ರೀತಿಯ ವಿಶ್ವಾಸ ತೋರಿದಾಗ ನಮ್ಮ ಆತ್ಮಬಲ ವೃದ್ಧಿಯಾಗುತ್ತದೆ’ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.