IPL 2025: ವೇಗದ ಶತಕ, ಯಶಸ್ಸಿನ ಗುಟ್ಟು ಬಿಚ್ಚಿಟ್ಟ ವೈಭವ್ ಸೂರ್ಯವಂಶಿ! Video
14 ನೇ ವರ್ಷದ ಸೂರ್ಯವಂಶಿ 11 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಹೊಡೆದು ತಾನೂ ಆಡಿದ ಮೂರನೇ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಜೈಪುರ: ಟಿ20ಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ವೈಭವ್ ಸೂರ್ಯವಂಶಿ, 5 ವರ್ಷ ಇದ್ದಾಗಲೇ ಕ್ರಿಕೆಟ್ ಆಡಲು ಶುರು ಮಾಡಿದ್ದರಂತೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 5 ಎಸೆತಗಳಲ್ಲಿ ಮೂರು ಅಂಕಿಗಳ ಗಡಿ ತಲುಪಿ, ಐಪಿಎಲ್ ಇತಿಹಾಸದಲ್ಲಿ ವೇಗದಲ್ಲಿ ಶತಕ ಬಾರಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು. 14 ನೇ ವರ್ಷದ ಸೂರ್ಯವಂಶಿ 11 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಹೊಡೆದು ತಾನೂ ಆಡಿದ ಮೂರನೇ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
210 ರನ್ ಗಳ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ 15.5 ಓವರ್ಗಳಲ್ಲಿ 8 ವಿಕೆಟ್ಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು. ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 70 ರನ್ ಗಳಿಸಿದರು.
5 ವರ್ಷದವನಿದ್ದಾಗಲೇ ಕ್ರಿಕೆಟ್ ಕಲಿಕೆ: ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಸೂರ್ಯವಂಶಿ, ನಾನು 5 ವರ್ಷದವನಿದ್ದಾಗಲೇ ನನ್ನ ತಂದೆ ನನಗೆ ಕ್ರಿಕೆಟ್ ಬಗ್ಗೆ ಕಲಿಸಿದರು. ಟರ್ಫ್ ವಿಕೆಟ್ಗಳಲ್ಲಿ ಆಡಲು ಪ್ರಾರಂಭಿಸಿದೆ ಮತ್ತು ಸಮಸ್ತಿಪುರದಲ್ಲಿ ನನ್ನ ವಿರುದ್ಧ ಉತ್ತಮ ಬೌಲರ್ಗಳನ್ನು ನಿಯೋಜಿಸಲಾಗಿತ್ತು. ಪಾಟ್ನಾದ ಕ್ರಿಕೆಟ್ ಅಕಾಡೆಮಿಗೆ ಸೇರುವ ಮೊದಲು ಎರಡು ವರ್ಷ ಹೀಗೆಯೇ ನಡೆಯಿತು. ಸಮಸ್ತಿಪುರ ಮತ್ತು ಪಾಟ್ನಾ ಎರಡೂ ಕಡೆಗಳಲ್ಲಿದ್ದಾಗ ಏರಿಳಿತ ಇತ್ತು. ನನ್ನಗೆ ಸಿಕ್ಕ ಅವಕಾಶದಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಿದ್ದೇನೆ ಎಂದರು.
ಪ್ರತಿದಿನ ಆರು ಗಂಟೆ ಅಭ್ಯಾಸ:
ಪ್ರತಿದಿನ ಆರು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಇದು ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಫಿಟ್ನೆಸ್ ಒಳಗೊಂಡಿತ್ತು ಎಂದು ತಿಳಿಸಿದ ಸೂರ್ಯವಂಶಿ, ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ತಂಡದ ನಿರ್ದೇಶಕ ಜುಬಿನ್ ಭರುಚಾ ಅವರನ್ನು ಶ್ಲಾಘಿಸಿದರು.
ರಾಹುಲ್ ದ್ರಾವಿಡ್ ಬೆನ್ನೆಲುಬು: ದ್ರಾವಿಡ್ ಸರ್, ವಿಕ್ರಮ್ ಸರ್ ಮತ್ತು ಜುಬಿನ್ ಸರ್ ನನ್ನೊಂದಿಗೆ ತಿಂಗಳುಗಟ್ಟಲೆ ಕೆಲಸ ಮಾಡಿದ್ದಾರೆ. ದ್ರಾವಿಡ್ ಸರ್ ನನಗೆ ತುಂಬಾ ಬೆಂಬಲ ನೀಡಿದ್ದು, ಆತ್ಮವಿಶ್ವಾಸ ಮೂಡಿಸಿದ್ದಾರೆ. ಐಪಿಎಲ್ನಲ್ಲಿ ಪ್ರದರ್ಶನ ನೀಡುತ್ತೇನೆ ಎಂದು ಅವರು ನನಗೆ ವಿಶ್ವಾಸ ನೀಡಿದರು. ಅಲ್ಲದೇ, ನನಗೆ ಅವಕಾಶ ನೀಡಿದರು. ಸಹಜವಾಗಿ ಆಟ ಆಡಲು ಮತ್ತು ತಾಳ್ಮೆಯಿಂದ ಇರಲು ಹೇಳಿದ್ದರು ಎಂದು ಸೂರ್ಯವಂಶಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



