IPl 2025: 'ರಾಜಸ್ಥಾನ್ ರಾಯಲ್ಸ್ ತಂಡದ ಈ ಸೀಸನ್ ಬಹುತೇಕ ಮುಗಿದಿದೆ'- ಬೌಲಿಂಗ್ ಕೋಚ್
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಡ್, ಪಾಯಿಂಟ್ ಟೇಬಲ್ ವಿಷಯದಲ್ಲಿ ತಂಡಕ್ಕೆ ಈ ಆವೃತ್ತಿ ಮುಗಿದಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್, ಐಪಿಎಲ್ 2025ರ ಪ್ಲೇಆಫ್ಗೆ ಪ್ರವೇಶಿಸುವ ಭರವಸೆಯನ್ನು ಕೈಬಿಟ್ಟಿದ್ದಾರೆ. ಆರ್ಆರ್ ಸದ್ಯ ಆಡಿರುವ 9 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಸೋಮವಾರ ಜಿಟಿ ವಿರುದ್ಧದ ತಂಡದ ಪಂದ್ಯಕ್ಕೂ ಮುನ್ನ, ರಿಯಾನ್ ಪರಾಗ್ ಮತ್ತು ತಂಡದ ಈ ಸೀಸನ್ ಬಹುತೇಕ ಮುಗಿದಿದೆ ಎಂದು ಬಾಂಡ್ ಒಪ್ಪಿಕೊಂಡಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಡ್, ಪಾಯಿಂಟ್ ಟೇಬಲ್ ವಿಷಯದಲ್ಲಿ ತಂಡಕ್ಕೆ ಈ ಆವೃತ್ತಿ ಮುಗಿದಿದೆ. ಆದರೆ, ಈ ಆವೃತ್ತಿಯನ್ನು ಕನಿಷ್ಠ ಉತ್ತಮ ರೀತಿಯಲ್ಲಿ ಮುಗಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
'ನನಗೆ ಅದೇ ನೋವುಂಟು ಮಾಡುತ್ತಿದೆ ಅಂತ ನಾನು ಭಾವಿಸುತ್ತೇನೆ. ನಾವು 2 ಗೆಲುವು ಮತ್ತು 7 ಪಂದ್ಯಗಳನ್ನು ಸೋತಿದ್ದೇವೆ. ಹೌದು, ಇದು ತಂಡದ ಮಟ್ಟಿಗೆ ಉತ್ತಮವಾಗಿಲ್ಲ. ಆದರೆ, ಈಗ ಅದರ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಪಾಯಿಂಟ್ ಟೇಬಲ್ ವಿಷಯದಲ್ಲಿ ನಾವು ಬಹುಶಃ ಟೂರ್ನಮೆಂಟ್ನಿಂದ ಹೊರಗುಳಿದಿದ್ದೇವೆ. ಆದರೆ, ಅದರರ್ಥ ಆಡಲು ಈಗ ಬೇರೇನು ಉಳಿದಿಲ್ಲ ಎಂದು ಅರ್ಥವಲ್ಲ' ಎಂದು ಬಾಂಡ್ ಹೇಳಿದರು.
ಸಂಜು ಸ್ಯಾಮ್ಸನ್ ಅವರ ಗಾಯ ಮತ್ತು ರನ್-ಚೇಸ್ಗಳಲ್ಲಿ ತಂಡದ ಅಸಮರ್ಥತೆಯಿಂದ ಆರ್ಆರ್ ಕಂಗೆಟ್ಟಿದೆ. ಗೆಲ್ಲುವ ಪಂದ್ಯಗಳನ್ನು ಕೂಡ ಸೋತು ತಂಡವು ಹೀನಾಯ ಪರಿಸ್ಥಿತಿಗೆ ಇಳಿದಿದೆ.
'ಆರಂಭದಲ್ಲಿ ತಂಡದ ಹೋರಾಟವು ಪ್ಲೇಆಫ್ಗೆ ತಲುಪುವುದಾಗಿತ್ತು. ಆದರೆ, ನಾವು ಈಗ ಪ್ಲೇಆಫ್ಗೆ ತಲುಪುವುದಿಲ್ಲ. ಆದ್ದರಿಂದ ನೀವು ಇದಕ್ಕೆ ಕಾರಣ ಏನೆಂಬುದನ್ನು ಗುರುತಿಸಬೇಕು ಮತ್ತು ಅದರೊಂದಿಗೆ ಪ್ರಾಮಾಣಿಕವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ನಾವು ಇಲ್ಲಿಯವರೆಗೆ ಸಾಕಷ್ಟು ಉತ್ತಮವಾಗಿಲ್ಲ. ಆದರೆ, ಅದರರ್ಥ ನಾವು ಅಲ್ಲಿಂದ ಹೊರಬರಲು ಮತ್ತು ಮುಂದಿನ ನಾಲ್ಕು ಅಥವಾ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ದೃಢನಿಶ್ಚಯ ಹೊಂದಿಲ್ಲ ಎಂದರ್ಥವಲ್ಲ. ಅದು ಎಂದಿಗೂ ಬದಲಾಗುವುದಿಲ್ಲ' ಎಂದು ಬಾಂಡ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



