ಕ್ರಿಕೆಟ್

IPL 2025: ಕನ್ನಡಿಗನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತ ಎಂದ ಅಂಬಟಿ ರಾಯುಡು

ಪ್ರಸಿದ್ಧ್ ಅವರು 41 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ 14 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

IPL 2025: ಕನ್ನಡಿಗನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತ ಎಂದ ಅಂಬಟಿ ರಾಯುಡು
ಅಂಬಟಿ ರಾಯುಡು
Published On :

ನವದೆಹಲಿ: ಗುಜರಾತ್ ಟೈಟಾನ್ಸ್ (GT) ಪರವಾಗಿ ಐಪಿಎಲ್ 2025ರ ಪ್ರಮುಖ ವಿಕೆಟ್ ಟೇಕರ್ ಆಗಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಟೂರ್ನಿಯಲ್ಲಿ 14 ವಿಕೆಟ್ ಕಬಳಿಸುವುದರೊಂದಿಗೆ ಇದೀಗ ಪರ್ಪಲ್ ಕ್ಯಾಪ್ ಮಾಲೀಕರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಮತ್ತು ಹಲವು ಬಾರಿ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದ ಅಂಬಟಿ ರಾಯುಡು ಪ್ರಸಿದ್ಧ್ ಕೃಷ್ಣ ಅವರನ್ನು ಹೊಗಳಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಜಿಟಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿದೆ. ಪ್ರಸಿದ್ಧ್ ಅವರು 41 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ 14 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಈ ವೇಗಿ ಗುಜರಾತ್ ಟೈಟಾನ್ಸ್ (ಜಿಟಿ) ಗೆ ಮಾತ್ರವಲ್ಲದೆ ಭವಿಷ್ಯದಲ್ಲಿ ಭಾರತ ತಂಡಕ್ಕೂ ಪ್ರಯೋಜನಕಾರಿ ಆಗಲಿದ್ದಾರೆ ಎಂದು ರಾಯುಡು ಹೇಳಿದ್ದಾರೆ.

ಗಾಯಗಳಿಂದಾಗಿ ಬಹಳ ಸಮಯದಿಂದ ಕ್ರಿಕೆಟ್‌ನಿಂದ ಹೊರಗುಳಿದಿದ್ದ ಪ್ರಸಿದ್ಧ್, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆಯುವ ಮೂಲಕ ಛಾಪು ಮೂಡಿಸಿದ್ದಾರೆ ಮತ್ತು ಇದೀಗ ಮತ್ತೊಮ್ಮೆ ಛಾಪು ಮೂಡಿಸುತ್ತಿದ್ದಾರೆ.

'ಅವರು ಉತ್ತಮ ಲಯದಲ್ಲಿ ಕಾಣುತ್ತಿದ್ದಾರೆ. ಅವರ ಶಕ್ತಿ ಪಿಚ್ ಅನ್ನು ಬಲವಾಗಿ ಹೊಡೆಯುತ್ತಿದೆ. ಅವರು ಕೆಎಲ್ ರಾಹುಲ್‌ ಅವರಿಗೆ ಬೌಲ್ ಮಾಡಿದ ಚೆಂಡು ಸಾಕಷ್ಟು ಆಶ್ಚರ್ಯಕರವಾಗಿತ್ತು ಮತ್ತು ಅದು ಕೊನೆಯಲ್ಲಿ ಸರಿಯಾಗಿ ಚಲಿಸಿತು. ಅವರು ಕೆಎಲ್ ರಾಹುಲ್ ಅವರನ್ನೇ ಅಚ್ಚರಿಗೊಳಿಸಿದರು. ಅವರಲ್ಲಿ ಬಹಳಷ್ಟು ವೇರಿಯೇಷನ್ಸ್‌ಗಳಿಗವೆ. ಅವರ ಸ್ಲೋವರ್ ಬಾಲ್ ಕೂಡ ಸಾಕಷ್ಟು ಪರಿಣಾಮಕಾರಿಯಾಗಿದೆ. ಅವರು ಜಿಟಿಗೆ ಮಾತ್ರವಲ್ಲದೆ ಭಾರತಕ್ಕೂ ಸಹ ಉತ್ತಮ ಸ್ವತ್ತಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಇಎಸ್‌ಪಿಎನ್‌ಕ್ರಿನ್‌ಫೊದಲ್ಲಿ ರಾಯುಡು ಹೇಳಿದರು.

ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್, ರಾಯುಡು ಅವರ ಅಭಿಪ್ರಾಯಗಳನ್ನು ಒಪ್ಪಿಕೊಂಡರು. ಪ್ರಸಿದ್ಧ್ ಸದ್ಯ ಮೊಹಮ್ಮದ್ ಸಿರಾಜ್ ಜೊತೆಗೆ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಸ್ಪರ್ಧೆಯಲ್ಲಿ ಜಿಟಿಗೆ ದೊಡ್ಡ ಲಾಭವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

'ತಮ್ಮ ತಂಡಕ್ಕಾಗಿ ಸಿರಾಜ್ ಅವರೊಂದಿಗೆ ಬೌಲಿಂಗ್ ಮಾಡುವುದನ್ನು ಅವರು ನಿಜವಾಗಿಯೂ ಆನಂದಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಮೇಲೆ ಸ್ವಲ್ಪ ಒತ್ತಡವೂ ಇದೆ. ಅವರ ವೇಗ ಹೆಚ್ಚಿದೆ. ಅವರ ಎತ್ತರವಿರುವ ಕಾರಣದಿಂದಾಗಿ ಉತ್ತಮ ಬೌನ್ಸ್ ಕೂಡ ಸಿಗುತ್ತಿದೆ. ಬೌಲಿಂಗ್ ಮಾಡುವಾಗ ಚೆನ್ನಾಗಿ ಬೌನ್ಸ್ ಮಾಡುತ್ತಾರೆ ಮತ್ತು ಆಫ್ ಸ್ಟಂಪ್‌ಗೆ ಬಿಗಿಯಾಗುತ್ತಾರೆ. ಆದ್ದರಿಂದ ಚೆಂಡು ಹೆಚ್ಚಿನದನ್ನು ಮಾಡಬೇಕಾಗಿಲ್ಲ' ಎಂದರು.

'ಕೆಎಲ್ ಅವರಿಗೆ ಎಸೆದ ಚೆಂಡು ಹೆಚ್ಚು ಸ್ವಿಂಗ್ ಆಗಲಿಲ್ಲವಾದರೂ, ಸ್ವಲ್ಪ ಸ್ವಿಂಗ್ ಆಯಿತು. ಈ ಸಮಯದಲ್ಲಿ ಅವರು ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದರು ಎಂದು ನಾನು ಭಾವಿಸುತ್ತೇನೆ; ಅವರು ಬಾಲ್ ಅನ್ನು ರಿಲೀಸ್ ಮಾಡುವ ಪಾಯಿಂಟ್ ಉತ್ತಮವಾಗಿದೆ. ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹೊಸ ಚೆಂಡನ್ನು ತೆಗೆದುಕೊಳ್ಳದೆಯೇ ಮಧ್ಯಮ ಓವರ್‌ಗಳಲ್ಲಿ ಬಂದು ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಈ ವ್ಯಕ್ತಿಯನ್ನು ತಂಡದಲ್ಲಿ ಹೊಂದಿರುವುದು ಜಿಟಿಗೆ ವರವಾಗಿದೆ' ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.