ಕ್ರಿಕೆಟ್

IPL 2025: 'ಅಣ್ಣಾ ನಂಗೊಂದ್ ಬ್ಯಾಟ್ ಕೊಡಿ'; Virat Kohli ಬಳಿಕ Rohit Sharma ಬೆನ್ನು ಬಿದ್ದ Rinku Singh

ಮುಂಬೈನಲ್ಲಿ ನಡೆದ ಕೆಕೆಆರ್ vs ಎಂಐ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಪಂದ್ಯದ ನಂತರ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಮುಂಬೈ ತಂಡದ ರೋಹಿತ್ ಶರ್ಮಾರನ್ನು ಬ್ಯಾಟ್ ನೀಡುವಂತೆ ಕೇಳಿದ್ದಾರೆ.

IPL 2025: 'ಅಣ್ಣಾ ನಂಗೊಂದ್ ಬ್ಯಾಟ್ ಕೊಡಿ'; Virat Kohli ಬಳಿಕ Rohit Sharma ಬೆನ್ನು ಬಿದ್ದ Rinku Singh
ಬ್ಯಾಟ್ ಗಾಗಿ ರೋಹಿತ್ ಶರ್ಮಾ ಬೆನ್ನು ಬಿದ್ದ ರಿಂಕು ಸಿಂಗ್
Published On :

ಮುಂಬೈ: ಈ ಹಿಂದೆ ಹೊಸ ಬ್ಯಾಟ್ ಗಾಗಿ ವಿರಾಟ್ ಕೊಹ್ಲಿ (Virat Kohli)ಯನ್ನು ಕೇಳಿದ್ದ ರಿಂಕು ಸಿಂಗ್ (Rinku Singh) ಇದೀಗ ಬ್ಯಾಟ್ ಗಾಗಿ ರೋಹಿತ್ ಶರ್ಮಾ (Rohit Sharma) ಬೆನ್ನು ಬಿದ್ದಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಚಾಲ್ತಿಯಲ್ಲಿದ್ದು ಮುಂಬೈನಲ್ಲಿ ನಡೆದ ಕೆಕೆಆರ್ vs ಎಂಐ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಪಂದ್ಯದ ನಂತರ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಮುಂಬೈ ತಂಡದ ರೋಹಿತ್ ಶರ್ಮಾರನ್ನು ಬ್ಯಾಟ್ ನೀಡುವಂತೆ ಕೇಳಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ತಿಲಕ್ ವರ್ಮಾ ಲೇವಡಿ

ರಿಂಕು ಸಿಂಗ್ ಅವರು ರೋಹಿತ್ ಬಳಿ ಬ್ಯಾಟ್ ಕೇಳಿದಾಗ ಮುಂಬೈ ಬ್ಯಾಟರ್ ತಿಲಕ್ ವರ್ಮಾ ಅವರು ರಿಂಕುವನ್ನು ಲೇವಡಿ ಮಾಡಿರುವ ಕಿರು ವೀಡಿಯೊವನ್ನು ಮುಂಬೈ ತಂಡವು ತನ್ನMumbai ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ ರಿಂಕು ಅವರು ರೋಹಿತ್ ಶರ್ಮಾ ಬಳಿ ಬ್ಯಾಟ್ ನೀಡುವಂತೆ ಕೇಳುತ್ತಾರೆ.

ಈ ವೇಳೆ ಅಲ್ಲೇ ಇದ್ದ ತಿಲಕ್ ವರ್ಮಾ, ‘ಅವರ ಹೆಸರಲ್ಲೇ ಇಂತಹ ಉತ್ತಮ ಬ್ಯಾಟ್ ಇದೆ. ಆದರೂ ಬ್ಯಾಟ್ ಅನ್ನು ಕೇಳುತ್ತಿದ್ದಾರೆ’’ ಎಂದರು. ತಿಲಕ್ ಅವರ ಈ ಮಾತು ಎಲ್ಲರಲ್ಲೂ ನಗು ಮೂಡಿಸಿತು. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ನಕ್ಕು ಸುಮ್ಮನಾದರು.

ರಘುವಂಶಿಗೆ ಬ್ಯಾಟ್ ಕೊಟ್ಟ ರೋಹಿತ್

ಇನ್ನು ಈ ವೀಡಿಯೊದ ಅಂತ್ಯದಲ್ಲಿ ಕೆಕೆಆರ್‌ನ ಯುವ ಆಟಗಾರ ಎ.ರಘುವಂಶಿ ಬ್ಯಾಟ್ ಹಿಡಿದು ನಗುತ್ತಿರುವುದು ಕಂಡುಬಂದಿದೆ. ರೋಹಿತ್ ರಘುವಂಶಿಗೂ ಕೂಡ ಬ್ಯಾಟ್ ನೀಡಿದ್ದಾರೆ.

ಇದೇ ಮೊದಲೇನಲ್ಲ

ರಿಂಕು ಸಿಂಗ್ ಅಗ್ರ ಆಟಗಾರರಿಂದ ಬ್ಯಾಟ್ ಕೇಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ವಿರಾಟ್ ಕೊಹ್ಲಿ ಅವರಿಂದಲೂ ರಿಂಕು ಸಿಂಗ್ ಬ್ಯಾಟ್ ಸ್ವೀಕರಿಸಿದ್ದರು. ಆದರೆ ಇತ್ತೀಚೆಗೆ ಕೊಹ್ಲಿ ಅವರನ್ನು ಸಂಪರ್ಕಿಸಿದ್ದ ರಿಂಕು ಮತ್ತೊಂದು ಬ್ಯಾಟ್ ಕೊಡುವಂತೆ ಕೇಳಿದ್ದರು.

ಈ ಹಿಂದೆ ನಿಮ್ಮಿಂದ ಪಡೆದ ಬ್ಯಾಟ್ ಸ್ಪಿನ್ನರ್ ಎದುರು ಆಡುವಾಗ ತುಂಡಾಯಿತು ಎಂದು ರಿಂಕು ಒಪ್ಪಿಕೊಂಡಿದ್ದರು. ಇದರಿಂದ ಕೊಹ್ಲಿ ಅಸಮಾಧಾನಗೊಂಡಿದ್ದರು. ನಾನು ವಿರಾಟ್‌ರಿಂದ ಮತ್ತೊಂದು ಬ್ಯಾಟ್ ಸ್ವೀಕರಿಸಿದ್ದೇನೆ ಎಂದು ರಿಂಕು ನಂತರ ವೈರಲ್ ವೀಡಿಯೊದಲ್ಲಿ ಖಚಿತಪಡಿಸಿದ್ದರು.

ಇತ್ತೀಚೆಗೆ ಕೆಕೆಆರ್ ಆಟಗಾರ ರಿಂಕು ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದಲೂ ಬ್ಯಾಟ್ ನೀಡುವಂತೆ ವಿನಂತಿಸಿದ್ದು ಕಂಡುಬಂದಿತ್ತು. ಈ ಮೂಲಕ ಕೆಲವು ಶ್ರೇಷ್ಠ ಆಟಗಾರರಿಂದ ಬ್ಯಾಟ್ ಸಂಗ್ರಹಿಸುವ ತನ್ನ ಸಂಪ್ರದಾಯವನ್ನು ರಿಂಕು ಸಿಂಗ್ ಮುಂದುವರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.