IPL 2025: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಆರ್ ಸಿಬಿ vs ಗುಜರಾತ್ ಟೈಟನ್ಸ್ ಸೆಣಸಾಟ; ಹೆಡ್-ಟು-ಹೆಡ್ ದಾಖಲೆಗಳು!
ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್ ಸಿಬಿ, ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಹೆಚ್ಚು ಬಾರಿ ಗೆದ್ದ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೂ ಉಭಯ ತಂಡಗಳು ಐದು ಬಾರಿ ಸ್ಪರ್ಧಿಸಿದ್ದು, ಈ ಪೈಕಿ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದೆ.

ಬೆಂಗಳೂರು: ಇಂದು ಸಂಜೆ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ.
ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್ ಸಿಬಿ, ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಹೆಚ್ಚು ಬಾರಿ ಗೆದ್ದ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೂ ಉಭಯ ತಂಡಗಳು ಐದು ಬಾರಿ ಸ್ಪರ್ಧಿಸಿದ್ದು, ಈ ಪೈಕಿ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದೆ.
ಆದಾಗ್ಯೂ, ಮುಂಬೈ ಇಂಡಿಯನ್ಸ್ ವಿರುದ್ಧದ ಜಯದ ಹಿನ್ನೆಲೆಯಲ್ಲಿ ಗುಜರಾತ್ ಟೈಟನ್ಸ್ ಆರ್ ಸಿಬಿ ಅಭಿಮಾನಿಗಳ ಹರ್ಷೋದ್ಗಾರ, ಜೈಕಾರವನ್ನು ಮಂಕಾಗಿಸಿ, ಪ್ರಬಲ ಪೈಪೋಟಿ ನೀಡುವ ತವಕದಲ್ಲಿದೆ.
ಐಪಿಎಲ್ ನಲ್ಲಿ RCB vs GT ಹೆಡ್- ಟು- ಹೆಡ್ ದಾಖಲೆಗಳು
ಆಡಿರುವ ಪಂದ್ಯ -5
ಆರ್ ಸಿಬಿ ಗೆಲುವು-3
GT ಗೆಲುವು- 2
ಕೊನೆಯ ಬಾರಿಯ ಫಲಿತಾಂಶ: 2024ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು.
IPL ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ರೆಕಾರ್ಡ್ ಗಳು
ಆಡಿರುವ ಪಂದ್ಯಗಳು: 91
ಜಯ ಸಾಧಿಸಿದ ಪಂದ್ಯಗಳು: 43
ಸೋತಿರುವ ಪಂದ್ಯಗಳು: 43
ಟೈಯಾದ ಪಂದ್ಯ: 1
ಫಲಿತಾಂಶ ಇಲ್ಲದ ಪಂದ್ಯಗಳು:4
ಅತಿ ಹೆಚ್ಚು ರನ್ ಗಳಿಸಿದ ಪಂದ್ಯ: 263 / 5 (20) ಪುಣೆ ವಾರಿಯರ್ಸ್ ವಿರುದ್ಧ (2013)
ಅತಿ ಕಡಿಮೆ ರನ್ ಗಳಿಸಿದ ಪಂದ್ಯ: 82 ಕ್ಕೆ ಆಲೌಟ್ (15.1) ಕೆಕೆಆರ್ ವಿರುದ್ಧ (2008)
RCB VS GT ಐಪಿಎಲ್ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದವರು
ವಿರಾಟ್ ಕೊಹ್ಲಿ (RCB) 5ರ ಸರಾಸರಿಯಲ್ಲಿ 344
ಪಾಫ್ ಡು ಪ್ಲೇಸಿಸ್ (RCB) 5ರ ಸರಾಸರಿಯಲ್ಲಿ 160
ಶುಭಮನ್ ಗಿಲ್ (GT) 5 ರ ಸರಾಸರಿಯಲ್ಲಿ 154
RCB VS GT ಐಪಿಲ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು
ಮೊಹಮ್ಮದ್ ಸಿರಾಜ್ (RCB) 4 ಪಂದ್ಯ 5 ವಿಕೆಟ್
ನೂರ್ ಅಹ್ಮದ್ (GT) 3 ಪಂದ್ಯ 4 ವಿಕೆಟ್
ರಶೀದ್ ಖಾನ್ (GT) 5 ಪಂದ್ಯ 4 ವಿಕೆಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



