ಕ್ರಿಕೆಟ್

1st test: 2ನೇ ಇನ್ನಿಂಗ್ಸ್ ನಲ್ಲಿ 462 ರನ್ ಚಚ್ಚಿದ ಭಾರತ; Rohit Sharma ಪಡೆಯ ಭರ್ಜರಿ 'ರನ್ ರೇಟ್', 34 ವರ್ಷಗಳ ದಾಖಲೆ ಪತನ!

ರೋಹಿತ್ ಶರ್ಮಾ (52 ರನ್), ವಿರಾಟ್ ಕೊಹ್ಲಿ (70 ರನ್) ಮತ್ತು ರಿಷಬ್ ಪಂತ್ (99 ರನ್) ಅರ್ಧಶತಕ ಸಿಡಿಸಿದರೆ, ಉದಯೋನ್ಮುಖ ಆಟಗಾರ ಸರ್ಫರಾಜ್ ಖಾನ್ (150 ರನ್) ಶತಕ ಸಿಡಿಸಿದರು.

1st test: 2ನೇ ಇನ್ನಿಂಗ್ಸ್ ನಲ್ಲಿ 462 ರನ್ ಚಚ್ಚಿದ ಭಾರತ; Rohit Sharma ಪಡೆಯ ಭರ್ಜರಿ 'ರನ್ ರೇಟ್', 34 ವರ್ಷಗಳ ದಾಖಲೆ ಪತನ!
ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್-ಸರ್ಫರಾಜ್ ಖಾನ್ ಜೋಡಿ
Published On :

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿರುವ ಭಾರತ ತಂಡ 462 ರನ್ ಪೇರಿಸಿದ್ದು ಮಾತ್ರವಲ್ಲದೇ 'ರನ್ ರೇಟ್' ದಾಖಲೆ ನಿರ್ಮಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 99.3 ಓವರ್ ನಲ್ಲಿ 462 ರನ್ ಗೆ ಆಲೌಟ್ ಆಯಿತು.

ಭಾರತ ತಂಡದ ಪರ 2ನೇ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ (52 ರನ್), ವಿರಾಟ್ ಕೊಹ್ಲಿ (70 ರನ್) ಮತ್ತು ರಿಷಬ್ ಪಂತ್ (99 ರನ್) ಅರ್ಧಶತಕ ಸಿಡಿಸಿದರೆ, ಉದಯೋನ್ಮುಖ ಆಟಗಾರ ಸರ್ಫರಾಜ್ ಖಾನ್ (150 ರನ್) ಶತಕ ಸಿಡಿಸಿದರು.

Rohit Sharma ಪಡೆಯ 'ರನ್ ರೇಟ್' ದಾಖಲೆ

2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ದಾಖಲೆಯ ರನ್ ರೇಟ್ ನಲ್ಲಿ ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಇದು ಭಾರತದ ಗರಿಷ್ಠ ರನ್ ರೇಟ್ ಹೊಂದಿದ ಪಂದ್ಯವಾಗಿದೆ. 2ನೇ ಇನ್ನಿಂಗ್ಸ್ ನಲ್ಲಿ ಭಾರತ 99.3 ಓವರ್ ನಲ್ಲಿ 4.64 ಸರಾಸರಿಯಲ್ಲಿ 462 ರನ್ ಪೇರಿಸಿದ್ದು, ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡದ ಇನ್ನಿಂಗ್ಸ್ ವೊಂದರ ಗರಿಷ್ಠ ರನ್ ರೇಟ್ ಆಗಿದೆ.

34 ವರ್ಷಗಳ ದಾಖಲೆ ಪತನ

ಈ ಹಿಂದೆ 1990ರಲ್ಲಿ ಆಕ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 104.3 ಓವರ್ ನಲ್ಲಿ 4.61 ಸರಸಾರಿ ರನ್ ರೇಟ್ ನಲ್ಲಿ 482 ರನ್ ಕಲೆಹಾಕಿತ್ತು. ಇದು ಈ ವರೆಗಿನ ಭಾರತ ತಂಡದ ಗರಿಷ್ಟ ರನ್ ರೇಟ್ ಆಗಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ 34 ವರ್ಷಗಳ ತನ್ನದೇ ಹಳೆಯ ದಾಖಲೆಯನ್ನು ಮುರಿದಿದೆ.

Highest run-rates in a 450-plus Test innings for India

  • 4.64 - 462 (99.3) vs NZ, Bengaluru, 2024

  • 4.61 - 482 (104.3) vs NZ, Auckland, 1990

  • 4.58 - 495 (108) vs WI, Mumbai WS, 2013

  • 4.52 - 474 (104.5) vs AFG, Bengaluru, 2018

  • 4.50 - 600 (133.1) vs SL, Galle, 2017

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.