2nd T20: ನಿತೀಶ್ ರೆಡ್ಡಿ ಮತ್ತೊಂದು ದಾಖಲೆ, ಸ್ಪಿನ್ ಬೌಲಿಂಗ್ ನಲ್ಲಿ ಗರಿಷ್ಠ ರನ್ ಸಿಡಿಸಿದ 5ನೇ ಬ್ಯಾಟರ್
ಬಾಂಗ್ಲಾ ಸ್ಪಿನ್ನರ್ ಗಳ ವಿರುದ್ಧ ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನ ನೀಡಿದ ನಿತೀಶ್ ರೆಡ್ಡಿ ಕೇವಲ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ದಾಖಲೆಯ 217.65 ಸ್ಟ್ರೈಕ್ ರೇಟ್ ನಲ್ಲಿ 74 ರನ್ ಸಿಡಿಸಿದರು.

ನವದೆಹಲಿ: ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ಉದಯೋನ್ಮುಖ ಆಟಗಾರ ನಿತೀಶ್ ರೆಡ್ಡಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ನಿತೀಶ್ ರೆಡ್ಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಕೇವಲ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ದಾಖಲೆಯ 217.65 ಸ್ಟ್ರೈಕ್ ರೇಟ್ ನಲ್ಲಿ 74 ರನ್ ಸಿಡಿಸಿದರು.
ಸ್ಪಿನ್ ಬೌಲಿಂಗ್ ಗರಿಷ್ಠ ರನ್ ಸಿಡಿಸಿದ ನಿತೀಶ್ ರೆಡ್ಡಿ
ಇಂದಿನ ಪಂದ್ಯದಲ್ಲಿ ಬಾಂಗ್ಲಾ ಸ್ಪಿನ್ನರ್ ಗಳ ವಿರುದ್ಧ ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನ ನೀಡಿದ ನಿತೀಶ್ ರೆಡ್ಡಿ ಕೇವಲ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ದಾಖಲೆಯ 217.65 ಸ್ಟ್ರೈಕ್ ರೇಟ್ ನಲ್ಲಿ 74 ರನ್ ಸಿಡಿಸಿದರು.
ಈ ಪೈಕಿ ಸ್ಪಿನ್ನರ್ ಗಳ ವಿರುದ್ಧವೇ ಅವರು 53ರನ್ ಸಿಡಿಸಿದ್ದು, ಆ ಮೂಲಕ ಸ್ಪಿನ್ನರ್ ಗಳ ವಿರುದ್ಧ ಗರಿಷ್ಠ ಮೊತ್ತ ದಾಖಲಿಸಿದ 5ನೇ ಭಾರತೀಯ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು.
ಇದಕ್ಕೂ ಮೊದಲು ಇದೇ ವರ್ಷ ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ ಸ್ಪಿನ್ ಬೌಲಿಂಗ್ ನಲ್ಲಿ 65ರನ್ ಕಲೆ ಹಾಕಿದ್ದರು. ಅಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 100ರನ್ ಸಿಡಿಸಿದ್ದರು.
ನಂತರದ ಸ್ಥಾನದಲ್ಲಿ ಭಾರತ ಮಾಜಿ ಆಟಗಾರ ಯುವರಾಜ್ ಸಿಂಗ್ ಇದ್ದು, ಯುವಿ 2012ರಲ್ಲಿ ಅಹ್ಮದಾಬಾದ್ ನಲ್ಲಿ ಪಾಕಿಸ್ತಾನ ವಿರುದ್ಧ ಸ್ಪಿನ್ ಬೌಲಿಂಗ್ ನಲ್ಲಿ 57 ರನ್ ಕಲೆಹಾಕಿದ್ದರು.
Most runs in an innings vs spin for an Indian batter (T20I)
65 Abhishek Sharma vs Zim Harare 2024
57 Yuvraj Singh vs Pak Ahmedabad 2012
55 Ruturaj Gaikwad vs Aus Guwahati 2023
54 Virat Kohli vs Afg Dubai 2022
53 Nitish Reddy vs Ban Delhi 2024
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



