ಕ್ರಿಕೆಟ್

India vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 135 ರನ್ ಜಯ; 3-1 ಅಂತರದಿಂದ ಸರಣಿ ಗೆಲುವು

ಜೋಹಾನ್ಸ್‌ಬರ್ಗ್ ನ ವಾಂಡರರ್ಸ್ ನಲ್ಲಿ ಈ ಪಂದ್ಯ ನಡೆಯಿತು. 284 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 148 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತು.

India vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 135 ರನ್ ಜಯ; 3-1 ಅಂತರದಿಂದ ಸರಣಿ ಗೆಲುವು
ಭಾರತ ಕ್ರಿಕೆಟ್ ತಂಡ — online desk
Published On :

ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಪರಿಣಾಮ 4 ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 135 ರನ್ ಗಳ ಜಯ ಗಳಿಸಿದ್ದು, 3-1 ಅಂತರದಿಂದ ಸರಣಿಯನ್ನು ಗೆದ್ದಿದೆ.

ಜೋಹಾನ್ಸ್‌ಬರ್ಗ್ ನ ವಾಂಡರರ್ಸ್ ನಲ್ಲಿ ಈ ಪಂದ್ಯ ನಡೆಯಿತು. 284 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 148 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತು.

ಅರ್ಶ್‌ದೀಪ್‌ನ ಆರಂಭಿಕ ಬೌಲಿಂಗ್ ದಾಳಿ, ಎದುರಾಳಿಗಳಿಗೆ ಯಶಸ್ವಿ ರನ್ ಚೇಸ್‌ಗೆ ಯಾವುದೇ ಅವಕಾಶವಿಲ್ಲದೆ ತತ್ತರಿಸುವಂತೆ ಮಾಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ, 20 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು.

ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇಬ್ಬರೂ ಶತಕ ಸಿಡಿಸಿದ್ದು, ಸರಣಿಯಲ್ಲಿ ಇಬ್ಬರೂ 2 ಶತಕ ಗಳಿಸಿದ್ದಾರೆ. ಸರಣಿ ಗೆಲುವಿನೊಂದಿಗೆ, ಭಾರತ ಜೂನ್‌ನಲ್ಲಿ T20 ವಿಶ್ವಕಪ್ ವಿಜಯದ ನಂತರ T20I ಸರಣಿಯಲ್ಲಿ ತಮ್ಮ ಅಜೇಯ ಓಟವನ್ನು ವಿಸ್ತರಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸಹ ಸೋಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.