IPL 2025: 'ನಾಯಕತ್ವ ಅಲ್ಲ.. ಗೌರವ, ಕಾಳಜಿ ಮತ್ತು ಪ್ರೀತಿ ಬೇಕು'; ಐಪಿಎಲ್ ಹರಾಜಿನಲ್ಲಿ ಖರೀದಿಸುವ ತಂಡಗಳಿಗೆ KL Rahul ಷರತ್ತು!
ಕೆಎಲ್ ರಾಹುಲ್ ಈ ಬಾರಿಯ ಹರಾಜು ಪ್ರಕ್ರಿಯೆಯ ದೊಡ್ಡ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಹಲವು ತಂಡಗಳು ಕೆಎಲ್ ರಾಹುಲ್ ರನ್ನು ಖರೀದಿಸಲು ಮುಗಿ ಬೀಳುವ ಸಾಧ್ಯತೆ ಇದೆ.

ನವದೆಹಲಿ: ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಲಖನೌ ತಂಡದಿಂದ ಹೊರಬಿದ್ದಿರುವ ಕನ್ನಡಿಗ ಕೆಎಲ್ ರಾಹುಲ್ ತಮ್ಮನ್ನು ಹರಾಜಿನಲ್ಲಿ ಖರೀದಿಸುವ ತಂಡಕ್ಕೆ 3 ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ.
ಐಪಿಎಲ್ ಫ್ರಾಂಚೈಸಿಗಳು ಐಪಿಎಲ್ 2025 ರ ಹರಾಜಿನ ಮೊದಲು ಬಿಡುಗಡೆ ಮಾಡಲಿರುವ ಆಟಗಾರರನ್ನು ಬಹಿರಂಗಪಡಿಸಿದ್ದು ಈ ಪೈಕಿ ಲಖನೌ ಸೂಪರ್ ಜೈಂಟ್ಸ್ ತಂಡ ಕೆಎಲ್ ರಾಹುಲ್ ರನ್ನು ತಂಡದಿಂದ ಕೈಬಿಟ್ಟಿದೆ.
ಇದರ ನಡುವೆಯೇ ಕೆಎಲ್ ರಾಹುಲ್ ಈ ಬಾರಿಯ ಹರಾಜು ಪ್ರಕ್ರಿಯೆಯ ದೊಡ್ಡ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಹಲವು ತಂಡಗಳು ಕೆಎಲ್ ರಾಹುಲ್ ರನ್ನು ಖರೀದಿಸಲು ಮುಗಿ ಬೀಳುವ ಸಾಧ್ಯತೆ ಇದೆ.
ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ಆರಂಭಿಕರಾಗಿ, ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ನಾಯಕರಾಗಿಯೂ ಕೆಎಲ್ ರಾಹುಲ್ ಸೇವೆ ಸಲ್ಲಿಸಿದ್ದು, ಅವರ ಸುದೀರ್ಘ ಅನುಭವ ಅವರ ಆಯ್ಕೆಗೆ ಪ್ರಮುಖ ಮಾನದಂಡಗಳಾಗಿರಲಿವೆ.
ಷರತ್ತು ವಿಧಿಸಿದ KL Rahul
ಇನ್ನು ತಮ್ಮನ್ನು ಖರೀದಿಸುವ ಫ್ರಾಂಚೈಸಿಗಳಿಗೆ ಕೆಎಲ್ ರಾಹುಲ್ 3 ಪ್ರಮುಖ ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳ ಪಟ್ಟಿಯಲ್ಲಿ ನಾಯಕತ್ವ ಇಲ್ಲವೇ ಇಲ್ಲ. ಅದಾಗ್ಯೂ ಕೆಎಲ್ ರಾಹುಲ್ ತಮ್ಮ ಹಿಂದಿನ ಕಹಿ ಅನುಭವಗಳನ್ನು ಪರಿಗಣನೆಗೆ ತೆಗೆದುಕೊಂಡು 3 ಷರತ್ತುಗಳನ್ನು ವಿಧಿಸಿದ್ದು, ನಾಯಕತ್ವವು ತನ್ನ ಆದ್ಯತೆಯಲ್ಲ, ಬದಲಿಗೆ "ಪ್ರೀತಿ, ಕಾಳಜಿ ವಹಿಸುವ ಮತ್ತು ಗೌರವಾನ್ವಿತ" ತಂಡದಲ್ಲಿ ಹೋಗಲು ಬಯಸುತ್ತಾನೆ ಎಂದು ರಾಹುಲ್ ಸ್ಪಷ್ಟವಾಗಿ ಹೇಳಿದ್ದಾರೆ.
ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ಕೆಎಲ್ ರಾಹುಲ್, "ನಾನು ಯಾವಾಗಲೂ ನನ್ನ ಮೈಂಡ್ ಸೆಟ್ ಗೆ ಹೊಂದಿಕೊಳ್ಳುತ್ತೇನೆ. ಓಪನಿಂಗ್, ಮಧ್ಯಮ ಕ್ರಮಾಂಕ, ಕೀಪಿಂಗ್, ಫೀಲ್ಡಿಂಗ್. ನನಗೆ ಯಾವುದೇ ಪಾತ್ರ ಅಥವಾ ಯಾವುದೇ ಜವಾಬ್ದಾರಿ ನೀಡಿದರೂ ನಾನು ನನ್ನ ಸಾಮರ್ಥ್ಯ ಮೀರಿ ಆಡುವ ಪ್ರಯತ್ನ ಮಾಡುತ್ತೇನೆ.
"ನಾನು ಯಾರನ್ನೂ ನಾಯಕತ್ವ ನೀಡಿ ಎಂದು ಕೇಳಲು ಹೋಗುವುದಿಲ್ಲ, ನನ್ನ ನಾಯಕತ್ವದ ಕೌಶಲ್ಯವು ಸಾಕಷ್ಟು ಉತ್ತಮವಾಗಿದೆ ಎಂದು ನೀವು ಭಾವಿಸಿದರೆ ಮತ್ತು ನನ್ನ ಕ್ರಿಕೆಟ್ ಆಡುವ ರೀತಿಯಲ್ಲಿ ನೀವು ಏನಾದರೂ ಒಳ್ಳೆಯದನ್ನು ಕಂಡುಕೊಂಡರೆ ಆಗ ನೀವು ನಿರ್ಣಯ ಕೈಗೊಳ್ಳಬಹುದು ಎಂದು ಹೇಳಿದರು.
ಅಂತೆಯೇ, 'ನಾನು ನನ್ನನ್ನು ನಿಭಾಯಿಸುವ ರೀತಿಯಲ್ಲಿ ಮತ್ತು ತಂಡಗಳನ್ನು ನಿಭಾಯಿಸಿದ ರೀತಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ವಿಶೇಷ ಅನುಭವ ಹೊಂದಿದ್ದೇನೆ. ನೀವು ನನ್ನನ್ನು ಯೋಗ್ಯರೆಂದು ಕಂಡುಕೊಂಡರೆ, ನಾನು ಅದನ್ನು ಮಾಡಲು ಸಂತೋಷ ಪಡುತ್ತೇನೆ, ನಾನು ಒಳ್ಳೆಯ ವಾತಾವರಣವನ್ನು ಹೊಂದಿರುವ ತಂಡದ ಭಾಗವಾಗಲು ಬಯಸುತ್ತೇನೆ ಎಂದರು.
ಎರಡು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಎಲ್‌ಎಸ್‌ಜಿಯಿಂದ ಹಿಂದೆ ಸರಿಯುವ ಬಗ್ಗೆ ಮಾತನಾಡಿದ ರಾಹುಲ್, 'ಐಪಿಎಲ್ ಗೆಲ್ಲಲು ಆ ಫ್ರಾಂಚೈಸಿಯಲ್ಲಿ ಎಲ್ಲರೂ ಕಾಳಜಿ ವಹಿಸಿದರು ಮತ್ತು ಗೌರವಿಸಿದರು. ನಾನು ಮತ್ತೆ ಹೊಸದಾಗಿ ಪ್ರಾರಂಭಿಸಲು ಬಯಸುತ್ತೇನೆ.
ನನ್ನ ಆಯ್ಕೆಗಳನ್ನು ಅನ್ವೇಷಿಸಲು ನಾನು ಬಯಸುತ್ತೇನೆ ಮತ್ತು ನಾನು ಸ್ವಲ್ಪ ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಮತ್ತು ತಂಡದ ವಾತಾವರಣವು ಸಾಧ್ಯವಾದ ಸ್ಥಳಕ್ಕೆ ಹೋಗಿ ಆಡಲು ಬಯಸುತ್ತೇನೆ. ಕೆಲವೊಮ್ಮೆ ನೀವು ಸ್ವಲ್ಪ ದೂರ ಹೋಗಬೇಕು ಮತ್ತು ನಿಮಗಾಗಿ ಒಳ್ಳೆಯದನ್ನು ಕಂಡುಕೊಳ್ಳಬೇಕು ಎಂದು ರಾಹುಲ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



