147 ವರ್ಷಗಳ ನಂತರ ಅತ್ಯಪರೂಪದ ಸಾಧನೆ: ಶ್ರೀಲಂಕಾ ಬ್ಯಾಟ್ಸ್ ಮನ್ ಕಮಿಂದು ಮೆಂಡಿಸ್ ಭಾಜನ!
ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ ರೌಂಡರ್ ಕಮಿಂದು ಮೆಂಡಿಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

ಸಿಲ್ಹೆಟ್: ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ ರೌಂಡರ್ ಕಮಿಂದು ಮೆಂಡಿಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. 147 ವರ್ಷಗಳಲ್ಲೇ ಮೊದಲ ಬಾರಿಗೆ ಈ ಐತಿಹಾಸಿಕ ಮೈಲಿಗಲ್ಲು ತಲುಪಿರುವ ಆಟಗಾರ ಎಂಬ ಖ್ಯಾತಿಗೆ ಲಂಕಾ ಕ್ರಿಕೆಟಿಗ ಭಾಜನರಾಗಿದ್ದಾರೆ.
ನಂ.7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿರುವ ಆಟಗಾರ ಒಂದೇ ಪಂದ್ಯದಲ್ಲಿ 2 ಸೆಂಚುರಿ ದಾಖಲಿಸಿರುವ ಮೈಲಿಗಲ್ಲು ಇದಾಗಿದೆ.
ಸಿಲ್ಹೆಟ್ ನಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದ 3 ನೇ ದಿನದಲ್ಲಿ ಮೆಂಡಿಸ್ ಈ ಸಾಧನೆ ಮಾಡಿದ್ದಾರೆ. ಮೆಂಡಿಸ್ ಮೊದಲ ಇನ್ನಿಂಗ್ಸ್ ನಲ್ಲಿ 102 ರನ್ ಗಳಿಸಿದ್ದರು, ಈ ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ 164 ರನ್ ಗಳಿಸಿದರು. ಈ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಧನಂಜಯ ಡೆ ಸಿಲ್ವಾ ಸಹ ಶತಕ ದಾಖಲಿಸಿದ್ದು ಈ ಜೋಡಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ 3 ನೇ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಗ್ರೆಗ್ ಚಾಪಲ್- ಇಯಾನ್ ಚಾಪೆಲ್ (ಆಸ್ಟ್ರೇಲಿಯಾ) ಹಾಗೂ ಮಿಸ್ಬಾ-ಉಲ್-ಹಕ್-ಅಜರ್ ಅಲಿ (ಪಾಕಿಸ್ತಾನ) ಜೋಡಿ ಈ ಐತಿಹಾಸಿಕ ಸಾಧನೆ ಮಾಡಿತ್ತುಭಾನುವಾರ ನಡೆದ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ಬಾಂಗ್ಲಾದೇಶಕ್ಕೆ 511 ರನ್‌ಗಳ ಗುರಿಯನ್ನು ನೀಡಿದ್ದು, ಧನಂಜಯ ಡಿ ಸಿಲ್ವಾ ಮತ್ತು ಕಮಿಂದು ಮೆಂಡಿಸ್ ಇಬ್ಬರೂ ಪಂದ್ಯದ ತಮ್ಮ ಎರಡನೇ ಶತಕವನ್ನು ಸಿಡಿಸಿದ್ದಾರೆ.
ಭಾನುವಾರ ನಡೆದ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ಬಾಂಗ್ಲಾದೇಶಕ್ಕೆ 511 ರನ್‌ಗಳ ಗುರಿಯನ್ನು ನೀಡಿದ್ದು, ಧನಂಜಯ ಡಿ ಸಿಲ್ವಾ ಮತ್ತು ಕಮಿಂದು ಮೆಂಡಿಸ್ ಇಬ್ಬರೂ ಪಂದ್ಯದ ತಮ್ಮ ಎರಡನೇ ಶತಕವನ್ನು ಸಿಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



