ಕ್ರಿಕೆಟ್

ಹಿನ್ನೋಟ 2024: ಈ ವರ್ಷ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರು ಇವರೇ...

2024ನೇ ವರ್ಷವು ಮುಗಿದು 2025ಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ಟೀಂ ಇಂಡಿಯಾ ಎಲ್ಲ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಿದೆ ಮತ್ತು ಬಲಿಷ್ಠವಾದ ಬೌಲಿಂಗ್ ಕೂಡ ತಂಡದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದೆ. 2024 ರಲ್ಲಿ ಭಾರತದ ಪರ ಅಗ್ರ ವಿಕೆಟ್ ಪಡೆದವರ ಪಟ್ಟಿ ಇಲ್ಲಿದೆ...

ಹಿನ್ನೋಟ 2024: ಈ ವರ್ಷ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರು ಇವರೇ...
ಟೀಂ ಇಂಡಿಯಾ
Published On :

1. ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ

ಭಾರತದ ಸ್ಟಾರ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರು ಭಾರತದ ಪ್ರಮುಖ ವಿಕೆಟ್ ಟೇಕರ್ ಮಾತ್ರವಲ್ಲ, 2024 ರಲ್ಲಿ ಯಾವುದೇ ಇತರ ಆಟಗಾರನಿಗಿಂತಲೂ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ಎಲ್ಲ ಮಾದರಿಯ 20 ಪಂದ್ಯಗಳಲ್ಲಿ ಒಟ್ಟಾರೆ 77 ವಿಕೆಟ್‌ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

2. ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್

ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ಆಫ್-ಸ್ಪಿನ್ನರ್ 2024 ರಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. 11 ಪಂದ್ಯಗಳಲ್ಲಿ, ಅಶ್ವಿನ್ 47 ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರು.

3. ರವೀಂದ್ರ ಜಡೇಜಾ

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ಭಾರತದ ಅನುಭವಿ ಆಲ್ ರೌಂಡರ್ ಎಲ್ಲ ಮಾದರಿಯಲ್ಲಿ ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. ರನ್ ಕಲೆಹಾಕುವ ಜೊತೆಗೆ 19 ಪಂದ್ಯಗಳಲ್ಲಿ ಜಡೇಜಾ 25.80 ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ.

4. ವಾಷಿಂಗ್ಟನ್ ಸುಂದರ್

ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್

ಜಡೇಜಾ ನಂತರದ ಸ್ಥಾನವನ್ನು ಸ್ಪಿನ್-ಬೌಲಿಂಗ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಪಡೆದಿದ್ದಾರೆ. ಹಲವು ವರ್ಷಗಳ ಬಳಿಕ ಮತ್ತೆ ಟೀಂ ಇಂಡಿಯಾಗೆ ವಾಪಸಾತಿ ಮಾಡಿರುವ ವಾಷಿಂಗ್ಟನ್ ಸುಂದರ್, 18 ಪಂದ್ಯಗಳಲ್ಲಿ 14.97 ಸರಾಸರಿಯಲ್ಲಿ 39 ವಿಕೆಟ್‌ಗಳನ್ನು ಪಡೆದಿದ್ದಾರೆ.

5. ಅರ್ಷದೀಪ್ ಸಿಂಗ್‌

ಅರ್ಶದೀಪ್ ಸಿಂಗ್
ಅರ್ಶದೀಪ್ ಸಿಂಗ್

2024 ರಲ್ಲಿ ಭಾರತಕ್ಕೆ T20I ಮಾದರಿಯಲ್ಲಿ ಭಾರತದ ಪ್ರಮುಖ ಬೌಲಿಂಗ್‌ ಅಸ್ತ್ರವಾಗಿರುವ ಎಡಗೈ ವೇಗಿ ಅರ್ಷದೀಪ್ ಸಿಂಗ್‌. ಈ ವರ್ಷ ಆಡಿರುವ 20 ಪಂದ್ಯಗಳಲ್ಲಿ 15.55 ಸರಾಸರಿಯಲ್ಲಿ 38 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.