IPL 2025, Champions Trophy: ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ; ಟೂರ್ನಿ ಯಾವಾಗಿನಿಂದ? ಇಲ್ಲಿದೆ ವಿವರ
ಈ ಬಾರಿ ನಡೆಯುತ್ತಿರುವ ಟೂರ್ನಿ indian premier league ನ 18 ನೇ ಸೀಸನ್ ಆಗಿದ್ದು, WTC ಫೈನಲ್ ಗೆ ಯಾವೆಲ್ಲಾ ತಂಡಗಳು ಪ್ರವೇಶ ಪಡೆಯಲಿವೆ ಎಂಬುದರ ಆಧಾರದಲ್ಲಿ ಐಪಿಎಲ್ ಟೂರ್ನಿಯ ಕೊನೆಯ ಹಂತದ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆಯೂ ಇದೆ.

ನವದೆಹಲಿ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದ IPL ವೇಳಾಪಟ್ಟಿ ಬಿಡುಗಡೆಯಾಗಿದೆ.
ಈ ಬಾರಿ ನಡೆಯುತ್ತಿರುವ ಟೂರ್ನಿ indian premier league ನ 18 ನೇ ಸೀಸನ್ ಆಗಿದ್ದು, WTC ಫೈನಲ್ ಗೆ ಯಾವೆಲ್ಲಾ ತಂಡಗಳು ಪ್ರವೇಶ ಪಡೆಯಲಿವೆ ಎಂಬುದರ ಆಧಾರದಲ್ಲಿ ಐಪಿಎಲ್ ಟೂರ್ನಿಯ ಕೊನೆಯ ಹಂತದ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆಯೂ ಇದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ ಜೂನ್ 11 ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಐಪಿಎಲ್ ಟೂರ್ನಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ kolkata knight riders ಹಾಗೂ sunrisers hyderabad ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ.
IPL 2025 ಆರಂಭಕ್ಕೂ ಮುನ್ನ women's premier league ಟೂರ್ನಿ ಫೆಬ್ರವರಿ 6 ರಿಂದ ಶುರುವಾಗಲಿದ್ದು, ಮಾರ್ಚ್ 9 ರಂದು ಮುಗಿಯಲಿದೆ. ಫೆಬ್ರವರಿ ತಿಂಗಳಿಂದಲೇ ಭಾರತದಲ್ಲಿ ಟಿ20 ಸರಣಿ ಪಂದ್ಯಗಳು ನಡೆಯಲಿದ್ದು ಮೇ ಅಂತ್ಯದವರೆಗೆ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ಸಿಗಲಿದೆ.
ಮಾರ್ಚ್ 14 ರಿಂದ IPL 2025 ಟೂರ್ನಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ 25 ರಂದು ನಡೆಯುವ ಸಾಧ್ಯತೆಗಳಿವೆ.
Champions Trophy
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆ.19 ರಿಂದ ಮಾ.09 ವರೆಗೆ ನಡೆಯಲಿದ್ದು, RevSportz ವರದಿಗಳ ಪ್ರಕಾರ, ಭಾರತ vs ಪಾಕಿಸ್ತಾನ ಪಂದ್ಯ ಫೆಬ್ರವರಿ 23 ರಂದು ನಿಗದಿಯಾಗಿದೆ. ಹೆಚ್ಚು ನಿರೀಕ್ಷಿತ ಘರ್ಷಣೆ ದುಬೈ ಅಥವಾ ಕೊಲಂಬೊದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ, ಅಂತಿಮ ಸ್ಥಳವನ್ನು ICC ಮತ್ತು PCB ಶೀಘ್ರದಲ್ಲೇ ನಿರ್ಧರಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



