ಐಪಿಎಲ್ 2024: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 10 ರನ್ ಗೆಲುವು!
ದೆಹಲಿಯಲ್ಲಿ ನಡೆದ ಮುಂಬೈ-ದೆಹಲಿ ತಂಡದ ನಡುವಿನ ಐಪಿಎಲ್ 2024 ರ 43 ನೇ ಪಂದ್ಯದಲ್ಲಿ ದೆಹಲಿ ತಂಡ ಮುಂಬೈ ತಂಡವನ್ನು 10 ರನ್ ಗಳಿಂದ ಮಣಿಸಿದೆ.

ನವದೆಹಲಿ: ದೆಹಲಿಯಲ್ಲಿ ನಡೆದ ಮುಂಬೈ-ದೆಹಲಿ ತಂಡದ ನಡುವಿನ ಐಪಿಎಲ್ 2024 ರ 43 ನೇ ಪಂದ್ಯದಲ್ಲಿ ದೆಹಲಿ ತಂಡ ಮುಂಬೈ ತಂಡವನ್ನು 10 ರನ್ ಗಳಿಂದ ಮಣಿಸಿದೆ.
ಟಾಸ್ ಗೆದ್ದ ಮುಂಬೈ ತಂಡ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಭರ್ಜರಿ ಬ್ಯಾಟಿಂಗ್ ಮಾಡಿದ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು.
ಜೇಕ್ ಫ್ರೇಸರ್-ಮೆಕ್‌ಗುರ್ಕ್ (84 ರನ್) ಮತ್ತು ಅಭಿಷೇಕ್ ಪೋರಲ್ (36 ರನ್) ಗಳಿಸಿ ತಂಡಕ್ಕೆ 100ಕ್ಕೂ ಅಧಿಕ ರನ್ ಗಳ ಜೊತೆಯಾಟ ನೀಡಿದರು. ಶಾಯ್ ಹೋಪ್ 41 ರನ್, ರಿಷಬ್ ಪಂತ್ 29 ರನ್, ಟ್ರಿಸ್ಟಿನ್ ಸ್ಟಬ್ 48 ರನ್ ಮತ್ತು ಅಕ್ಷರ್ ಪಟೇಲ್ 11 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (8 ರನ್) ಮತ್ತು ಇಶಾನ್ ಕಿಶನ್ (20 ರನ್) ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು ಸೂರ್ಯಕುಮಾರ್ (26 ರನ್) ನೆಹಾಲ್ ವಡೇರಾ (4ರನ್) ಮೊಹಮ್ಮದ್ ನಬಿ (7 ರನ್) ಗಳಿಸಿದರೆ, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ 32 ಎಸೆತಗಳಲ್ಲಿ 63 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 24 ಎಸೆತದಲ್ಲಿ 46 ರನ್ ಗಳಿಸಿ ತಂಡಕ್ಕೆ ನೆರವಾದರಾದರೂ ನಿಗದಿತ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸುವ ಮೂಲಕ 10 ರನ್ ಗಳಿಂದ ಸೋಲನ್ನಪ್ಪಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದ್ದು, ಇದಕ್ಕಾಗಿ ಇನ್ನೂ ಒಂದು ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



