ICC Cricket World Cup 2023: ಕೊನೆಯ ಸ್ಥಾನಿ ಇಂಗ್ಲೆಂಡ್ ಗೆ ಇನ್ನೂ ಇದೆ ಚಾನ್ಸ್.. ಇಲ್ಲಿದೆ ಸೆಮೀಸ್ ಲೆಕ್ಕಾಚಾರ!
ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ ಭಾರತ ತಂಡ ಹಾಲಿ ಆವೃತ್ತಿಯ ವಿಶ್ವಕಪ್ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆದಿದ್ದು, ಅಚ್ಚರಿ ಎಂದರೆ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವ ಇಂಗ್ಲೆಂಡ್ಗೂ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ.

ಮುಂಬೈ: ಶ್ರೀಲಂಕಾ (SriLanka) ವಿರುದ್ಧ ಗೆಲುವು ಸಾಧಿಸಿದ ಭಾರತ ತಂಡ ಹಾಲಿ ಆವೃತ್ತಿಯ ವಿಶ್ವಕಪ್ (ICC Cricket World Cup 2023)ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆದಿದ್ದು, ಬಾಕಿ ಉಳಿದಿರುವ ಮೂರು ಸ್ಥಾನಗಳಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಚ್ಚರಿ ಎಂದರೆ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವ ಇಂಗ್ಲೆಂಡ್ಗೂ ಸೆಮಿಫೈನಲ್ (SemiFinals) ಪ್ರವೇಶಿಸುವ ಅವಕಾಶವಿದೆ.
ಅಚ್ಚರಿಯಾದರೂ ಇದು ನಿಜ.. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ (England) ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ತಾನಾಡಿದ 6 ಪಂದ್ಯಗಳಲ್ಲಿ ಐದರಲ್ಲಿ ಸೋಲು ಕಂಡು 2 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿದ್ದು, ನೆದರ್ಲೆಂಡ್ಸ್, ಆಸ್ಟ್ರೇಲಿಯಾ (Australia) ಮತ್ತು ಪಾಕಿಸ್ತಾನ ತಂಡಗಳ ಎದುರು ಸೆಣಸಲಿದೆ. ಈ ಮೂರು ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದರೆ 8 ಅಂಕ ಸಂಪಾದಿಸಿ, ಉಳಿದಿರುವ ಮೂರು ಸ್ಥಾನಗಳ ಪೈಕಿ ಯಾವುದಾದದರು ಒಂದು ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಬಹುದು.
ಆದರೆ ಇಲ್ಲಿ ಇಂಗ್ಲೆಂಡ್ ಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ (Newzealand) ಮತ್ತು ಪಾಕಿಸ್ತಾನ (Pakistan) ತಂಡಗಳು ಪ್ರಬಲ ಪೈಪೋಟಿ ನೀಡುತ್ತಿದ್ದು, ಆಗ ಇಲ್ಲಿ ನೆಟ್ ರನ್ ರೇಟ್ ಲೆಕ್ಕಾಚಾರ ಬರುತ್ತದೆ. ಭಾರತ ತಂಡ (Team India) ಲಂಕಾ ವಿರುದ್ಧ ಗೆಲ್ಲುವ ಮೂಲಕ ವಿಶ್ವಕಪ್ನಲ್ಲಿ ಆಡಿದ ಎಲ್ಲ 7 ಪಂದ್ಯಗಳನ್ನು ಗೆದ್ದು 14 ಅಂಕದೊಂದಿಗೆ 2.102 ನೆಟ್ ರನ್ ರೇಟ್ ದಾಖಲಿಸಿದೆ. ಸದ್ಯ ಭಾರತಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿವೆ. ಈ ಎರಡೂ ಪಂದ್ಯಗಳನ್ನು ಸೋತರೂ ಭಾರತಕ್ಕೆ ಯಾವುದೇ ನಷ್ಟ ಇಲ್ಲ. ಏಕೆಂದರೆ ಭಾರತ ಈಗಾಗಲೇ ಸೆಮೀಸ್ ಗೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ.
2ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (South Africa) ಇದ್ದು, ಆಫ್ರಿಕಾ ತಂಡ 12 ಅಂಕಗಳೊಂದಿಗೆ 2.290 ನೆಟ್ ರನ್ ರೇಟ್ ಹೊಂದಿದ್ದು, ಅದರ ಸೆಮೀಸ್ ಸ್ಥಾನ ಕೂಡ ಅಬಾಧಿತ ಎನ್ನಬಹುದು. ಸದ್ಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಉಳಿದಿರುವ ಮೂರು ಪಂದ್ಯಗಳಲ್ಲಿ ಸೋಲು ಕಾಣಬೇಕು. ಈ ಮೂರು ಸೋಲಿನಿಂದ ಉಭಯ ತಂಡಗಳು ಈಗಿರುವ 8 ಅಂಕದಲ್ಲೇ ಉಳಿಯಲಿದೆ. ಆಗ ನೆಟ್ ರನ್ರೇಟ್ ಆಧಾರದಲ್ಲಿ ಈ ಅದೃಷ್ಟ ಇಂಗ್ಲೆಂಡ್ಗೆ ಸಿಗಬಹುದು.
ಏಕೆಂದರೆ ಸೋಲು ಕಂಡ ಕಾರಣ ಕಿವೀಸ್ ಮತ್ತು ಆಸೀಸ್ ತಂಡದ ರನ್ ರೇಟ್ ಕುಸಿತ ಕಂಡಿರುತ್ತದೆ. ಸತತ ಗೆಲುವು ಸಾಧಿಸಿದ ಇಂಗ್ಲೆಂಡ್ನ ರನ್ರೇಟ್ ಪ್ಲಸ್ ಆಗಿರುತ್ತದೆ. ಹೀಗಾಗಿ ಇಂಗ್ಲೆಂಡ್ಗೆ ಈ ಲಾಭ ಸಿಗಲಿದೆ. ಒಂದೊಮ್ಮೆ ಇಂಗ್ಲೆಂಡ್ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾ ಮತ್ತು ಕಿವೀಸ್ ಮುಂದಿನ ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯ ಗೆದ್ದರೂ ಇಂಗ್ಲೆಂಡ್ಗೆ ಸೆಮಿ ಫೈನಲ್ ಅವಕಾಶ ಸಿಗುವುದಿಲ್ಲ.
ಏಕೆಂದರೆ ಆಗ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಬಳಿ ತಲಾ 10 ಅಂಕಗಳಿರುತ್ತದೆ. ಹೆಚ್ಚು ಅಂಕಗಳ ಲೆಕ್ಕಾಚಾರದಲ್ಲಿ ಈ ತಂಡಗಳು ಸೆಮೀಸ್ ಹಂತಕ್ಕೇರುತ್ತವೆ. ಒಟ್ಟಾರೆ ಇಂಗ್ಲೆಂಡ್ ಈ ಎಲ್ಲ ಲೆಕ್ಕಾಚಾರದ ಪ್ರಕಾರ ಸೆಮಿಫೈನಲ್ಗೆ ಬಂದರೆ ನಿಜಕ್ಕೂ ಇದೊಂದು ಪವಾಡವೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


