ಕ್ರಿಕೆಟ್

ಐಪಿಎಲ್ 2023: ಶುಬ್ಮನ್ ಗಿಲ್ ಶತಕ, ಫೈನಲ್ ಗೆ ಗುಜರಾತ್‌ ಟೈಟಾನ್ಸ್‌; ಚೆನ್ನೈ ವಿರುದ್ಧ ಮುಖಾಮುಖಿ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಶುಭಮನ್‌ ಗಿಲ್‌ ಸ್ಫೋಟಕ ಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 62 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಐಪಿಎಲ್ 2023: ಶುಬ್ಮನ್ ಗಿಲ್ ಶತಕ, ಫೈನಲ್ ಗೆ ಗುಜರಾತ್‌ ಟೈಟಾನ್ಸ್‌; ಚೆನ್ನೈ ವಿರುದ್ಧ ಮುಖಾಮುಖಿ
ಶುಬ್ಮನ್ ಗಿಲ್
Published On :

ಅಹಮದಾಬಾದ್‌: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಶುಭಮನ್‌ ಗಿಲ್‌ ಸ್ಫೋಟಕ ಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 62 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ ಪ್ರವೇಶಿಸಿದೆ.

ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್‌ ಟೈಟಾನ್ಸ್‌, ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 233 ರನ್ ಗಳ ಬೃಹತ್ ಟಾರ್ಗೆಟ್ ನೀಡಿತು. ಬೃಹತ್ ಗುರಿ ಬೆನ್ನಟಿದ ಮುಂಬೈ 18.2 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪ್ರಶಸ್ತಿ ಗೆಲ್ಲುವ ಮುಂಬೈ ತಂಡದ ಕನಸು ಕೂಡ ಭಗ್ನಗೊಂಡಿದೆ. 

ಐದು ಬಾರಿ ಚಾಂಪಿಯನ್ಸ್‌ ಪಟ್ಟಕ್ಕೇರಿದ್ದ ಮುಂಬೈ ಇಂಡಿಯನ್ಸ್‌ ಈ ಸೋಲಿನೊಂದಿಗೆ 2023ರ ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ. 

2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ ತಲುಪಿದೆ. ಸೂಪರ್‌ ಸಂಡೇನಲ್ಲಿ (ಮೇ 28) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ.

ಗುಜರಾತ್ ಪರ ಶುಭಮನ್‌ ಗಿಲ್‌ ಸ್ಫೋಟಕ ಶತಕ ಬಾರಿಸಿ ಮಿಂಚಿದರು. 60 ಎಸೆತಗಳನ್ನು ಎದುರಿಸಿದ ಗಿಲ್ 10 ಸಿಕ್ಸರ್ ಹಾಗೂ ಏಳು ಬೌಂಡರಿ ಬಾರಿಸುವ ಮೂಲಕ 129 ರನ್ ಗಳಿಸಿ ಗಳಿಸಿ ಔಟಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.