ಕ್ರಿಕೆಟ್

IND Vs NZ ODI: ನಟ ಜೂ. ಎನ್‌ಟಿಆರ್ ಭೇಟಿಯಾಗಿ ಅಭಿನಂದಿಸಿದ ಟೀಂ ಇಂಡಿಯಾ ಕ್ರಿಕೆಟಿಗರು

ನಾಳೆಯಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾದ ಕ್ರಿಕೆಟಿಗರು ಹೈದರಾಬಾದ್‌ನಲ್ಲಿ ತೆಲುಗು ನಟ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಮಾಡಿದರು.

IND Vs NZ ODI: ನಟ ಜೂ. ಎನ್‌ಟಿಆರ್ ಭೇಟಿಯಾಗಿ ಅಭಿನಂದಿಸಿದ ಟೀಂ ಇಂಡಿಯಾ ಕ್ರಿಕೆಟಿಗರು
ನಟ ಜೂನಿಯರ್‌ ಎನ್‌ಟಿಆರ್ ರನ್ನು ಭೇಟಿ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರು
Published On :

ಹೈದರಾಬಾದ್: ನಾಳೆಯಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾದ ಕ್ರಿಕೆಟಿಗರು ಹೈದರಾಬಾದ್‌ನಲ್ಲಿ ತೆಲುಗು ನಟ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಮಾಡಿದರು.

ಸೂರ್ಯ ಕುಮಾರ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಅವರು 'RRR' ಸ್ಟಾರ್ ಜೊತೆಗಿನ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಯಾದವ್ ಮತ್ತು ಚಾಹಲ್ ಜೊತೆಗೆ, ಶುಭ್‌ಮನ್ ಗಿಲ್, ಇಶಾನ್ ಕಿಶನ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಭೇಟಿಯಾಗಿದ್ದಾರೆ. ಆರ್‌ಆರ್‌ಆರ್‌ ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ನಟನನ್ನು ಅಭಿನಂದಿಸಿದರು.

ಈ ಚಿತ್ರವನ್ನು ಹಂಚಿಕೊಂಡ ಸೂರ್ಯಕುಮಾರ್ ಯಾದವ್, 'ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತಸಮಯವಾಗಿತ್ತು, ಸಹೋದರ! ಗೋಲ್ಡನ್ ಗ್ಲೋಬ್ ಗೆದ್ದ 'RRR' ಗೆ ಮತ್ತೊಮ್ಮೆ ಅಭಿನಂದನೆಗಳು' ಎಂದು ಬರೆದಿದ್ದಾರೆ.

ಯುಜ್ವೇಂದ್ರ ಚಾಹಲ್ ಕೂಡ ಟಾಲಿವುಡ್‌ನಲ್ಲಿ 'ಮ್ಯಾನ್ ಆಫ್ ದಿ ಮಾಸ್' ಎಂದು ಕರೆಯಲ್ಪಡುವ ಜೂನಿಯರ್ ಎನ್‌ಟಿಆರ್ ಅವರೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದು, ಅವರನ್ನು ಸಂಭಾವಿತ ಎಂದು ಕರೆದು ದೊಡ್ಡ ಗೆಲುವಿಗಾಗಿ ಅಭಿನಂದಿಸಿದ್ದಾರೆ.

'ಮ್ಯಾನ್ ಆಫ್ ದಿ ಮಾಸ್ ಆದ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿಯಾಗಿದ್ದು ನಿಜಕ್ಕೂ ಸಂತೋಷ ತಂದಿದೆ. ಎಂತಹ ಸಂಭಾವಿತ ವ್ಯಕ್ತಿ. ಗೋಲ್ಡನ್ ಗ್ಲೋಬ್ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ನಾವೆಲ್ಲರೂ ಹೆಮ್ಮೆಪಡುತ್ತೇವೆ' ಎಂದು ಚಾಹಲ್ ಟ್ವೀಟ್ ಮಾಡಿದ್ದಾರೆ.

ಜೂನಿಯರ್ ಎನ್‌ಟಿಆರ್ ಕೂಡ ಯುವ ಕ್ರಿಕೆಟಿಗರಿಗೆ ಅವರ ಮುಂಬರುವ ಸರಣಿಗಳಿಗೆ 'ಗುಡ್ ಲಕ್' ಎಂದು ಹಾರೈಸಿದ್ದಾರೆ ಮತ್ತು 'ನಾಳೆ ಗೆಲುವಿನೊಂದಿಗೆ ಸರಣಿ ಆರಂಭಿಸಲು' ಪ್ರೋತ್ಸಾಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.