ಕ್ರಿಕೆಟ್

ಮೊದಲ ಟಿ20: ಲಂಕಾಗೆ 163 ರನ್ ಗುರಿ ನೀಡಿದ ಟೀಂ ಇಂಡಿಯಾ

ಅತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 162 ರನ್ ಪೇರಿಸಿದೆ.

ಮೊದಲ ಟಿ20: ಲಂಕಾಗೆ 163 ರನ್ ಗುರಿ ನೀಡಿದ ಟೀಂ ಇಂಡಿಯಾ
ಟೀಂ ಇಂಡಿಯಾ
Published On :

ವಾಂಖೆಡೆ(ಮುಂಬೈ): ಅತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 162 ರನ್ ಪೇರಿಸಿದೆ. 

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿದೆ. 

ಭಾರತ ಪರ ಇಶಾನ್ ಕಿಶನ್ 37, ಶುಭ್ಮನ್ ಗಿಲ್ 7, ಸೂರ್ಯಕುಮಾರ್ ಯಾದವ್ 7, ಸಂಜು ಸ್ಯಾಮ್ಸನ್ 5, ನಾಯಕ ಹಾರ್ದಿಕ್ ಪಾಂಡ್ಯ 29 ರನ್ ಸಿಡಿಸಿದ್ದರೆ ದೀಪಕ್ ಹೂಡಾ ಅಜೇಯ 41 ಮತ್ತು ಅಕ್ಷರ್ ಪಟೇಲ್ ಅಜೇಯ 31 ರನ್ ಪೇರಿಸಿದ್ದಾರೆ. 

ಲಂಕಾ ಪರ ಬೌಲಂಗ್ ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ, ಚಾಮಿಕಾ ಕರುಣಾರತ್ನೆ, ಧನಂಜಯ್ ಡಿ ಸಿಲ್ವ ಹಾಗೂ ವನಿಂದು ಹಸರಂಗ ಡಿ ಸಿಲ್ವ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.