ಏಷ್ಯಾ ಕಪ್ 2023: ಲಂಕಾ ಸ್ಪೀನ್ ದಾಳಿಗೆ ನಲುಗಿದ ಭಾರತ, 213ಕ್ಕೆ ಆಲೌಟ್!
ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2023ರ ಸೂಪರ್ 4 ರ ಹಂತದಲ್ಲಿ ಮಳೆ ಹಾಗೂ ಲಂಕಾ ಸ್ಪೀನ್ ದಾಳಿಗೆ ನಲುಗಿದ ಭಾರತ 213 ರನ್ ಗಳಿಗೆ ಆಲೌಟ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ಉತ್ತಮ ಆರಂಭ ಸಿಕ್ಕರೂ ಕೂಡ ಲಂಕಾ ಬೌಲರ್ ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದರು.

ಕೊಲಂಬೋ: ಇಲ್ಲಿನ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2023ರ ಸೂಪರ್ 4 ರ ಹಂತದಲ್ಲಿ ಮಳೆ ಹಾಗೂ ಲಂಕಾ ಸ್ಪೀನ್ ದಾಳಿಗೆ ನಲುಗಿದ ಭಾರತ 213 ರನ್ ಗಳಿಗೆ ಆಲೌಟ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕರೂ ಕೂಡ ಲಂಕಾ ಬೌಲರ್ ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದರು.
ಸ್ಪಿನ್ನರ್‌ಗಳಾದ ದುನಿತ್ ವೆಲ್ಲಲಾಗೆ ಮತ್ತು ಚರಿತ್ ಅಸಲಂಕಾ ಎಲ್ಲಾ 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ದೈತ್ಯ ಬ್ಯಾಟಿಂಗ್ ಕ್ರಮಾಂಕವನ್ನು 200 ರನ್ ಗಳಿಗೂ ಮುನ್ನವೇ ಕುಸಿಯುವಂತೆ ಮಾಡಿದರು. ದುನಿತ್ ವೆಲ್ಲಲ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪಡೆದರೆ, ಚರಿತ್ ಅಸಲಂಕಾ 4 ವಿಕೆಟ್ ಪಡೆದರು. ಇವರ ಬೌಲಿಂಗ್ ನಲ್ಲಿ ಇಶಾನ್ ಕಿಶನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ಔಟಾದರು.
ರೋಹಿತ್ ಶರ್ಮಾ (53), ಇಶಾನ್ ಕಿಶನ್ (33), ಕೆಎಲ್ ರಾಹುಲ್ (39) ಮಾತ್ರ 30 ರನ್‌ಗಳ ಗಡಿ ದಾಟಿದ ಆಟಗಾರರು. 47 ಓವರ್‌ಗಳ ಅಂತ್ಯಕ್ಕೆ ಮಳೆಯಿಂದ ಆಟ ನಿಲ್ಲುವವರೆಗೆ, ಭಾರತ 47 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 197 ರನ್ ಮಾತ್ರ ಗಳಿಸಿತು. ಮಳೆ ನಿಂತ ನಂತರ ಶ್ರೀಲಂಕಾದ ವೇಗಿಗಳು ಕೊನೆಯ ವಿಕೆಟ್ ಕಬಳಿಸಿ, ಭಾರತದ ಇನ್ನಿಂಗ್ಸ್ ನ್ನು 213 ಕ್ಕೆ ಪೂರ್ಣಗೊಳಿಸಿದರು. ಶ್ರೀಲಂಕಾ ಗೆಲುವಿಗೆ 50 ಓವರ್‌ಗಳಲ್ಲಿ 214 ರನ್ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


