ವಿಶ್ವಕಪ್ ನಲ್ಲಿ ವೇಗದ ಶತಕ ದಾಖಲಿಸಿದ ಮ್ಯಾಕ್ಸ್ ವೆಲ್!
ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ವಿಶ್ವಕಪ್ ನ ಅತಿ ವೇಗದ ಶತಕ ದಾಖಲಿಸಿದ್ದಾರೆ.

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ವಿಶ್ವಕಪ್ ನ ಅತಿ ವೇಗದ ಶತಕ ದಾಖಲಿಸಿದ್ದಾರೆ.
ಮ್ಯಾಕ್ಸ್ ವೆಲ್ ಗೆ ಸತತ 2 ನೇ ಶತಕ ಇದಾಗಿದ್ದು, ಆಸ್ಟ್ರೇಲಿಯಾ ತಂಡ ನೆದರ್ಲ್ಯಾಂಡ್ ವಿರುದ್ಧ 309 ರನ್ ಗಳ ಜಯ ಗಳಿಸಿದೆ. ಟೂರ್ನಮೆಂಟ್ ನ ಇತಿಹಾಸದಲ್ಲೇ ಇದು 2ನೇ ಗರಿಷ್ಠ ಅಂತರದ ಗೆಲುವಾಗಿದೆ.
8 ಸಿಕ್ಸ್, 4 ಬೌಂಡರಿ ಮೂಲಕ ಕೇವಲ 44 ಎಸೆತಗಳಲ್ಲಿ ಮ್ಯಾಕ್ಸ್ ವೆಲ್ 106 ರನ್ ಗಳಿಸಿದರು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಐಡೆನ್ ಮಾರ್ಕ್ರಾಮ್ ಇದೇ ಮೈದಾನದಲ್ಲಿ ಇದೇ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ನಡುವೆ ಇದುವರೆಗೆ ಕೇವಲ 2 ಏಕದಿನ ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳು ವಿಶ್ವಕಪ್‌ನಲ್ಲಿ ನಡೆದಿವೆ.
2003 ಮತ್ತು 2007ರ ವಿಶ್ವಕಪ್‌ನಲ್ಲಿ ನಡೆದ ಪಂದ್ಯಗಳಲ್ಲಿ, ಆಸ್ಟ್ರೇಲಿಯಾವು ನೆದರ್ಲ್ಯಾಂಡ್ಸ್ ವಿರುದ್ಧ ದೊಡ್ಡ ಜಯವನ್ನು ದಾಖಲಿಸಿತ್ತು. ಎರಡೂ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾ ತಂಡವು ಅಜೇಯವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


