ಅಂಡರ್-19 ಏಷ್ಯಾಕಪ್: ಭಾರತ ತಂಡ ಪ್ರಕಟ, ಉದಯ್ ಸಹರಾನ್ ನಾಯಕ
ಡಿಸೆಂಬರ್ 8 ರಿಂದ ಯುಎಇಯಲ್ಲಿ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ನಲ್ಲಿ ಭರವಸೆಯ ಬ್ಯಾಟ್ಸ್ಮನ್ ಉದಯ್ ಸಹರಾನ್ ಅವರು ಹಾಲಿ ಚಾಂಪಿಯನ್ ಭಾರತವನ್ನು ಮುನ್ನಡೆಸಲಿದ್ದಾರೆ.

ನವದೆಹಲಿ: ಡಿಸೆಂಬರ್ 8 ರಿಂದ ಯುಎಇಯಲ್ಲಿ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ನಲ್ಲಿ ಭರವಸೆಯ ಬ್ಯಾಟ್ಸ್ಮನ್ ಉದಯ್ ಸಹರಾನ್ ಅವರು ಹಾಲಿ ಚಾಂಪಿಯನ್ ಭಾರತವನ್ನು ಮುನ್ನಡೆಸಲಿದ್ದಾರೆ. ಸೌಮಿ ಕುಮಾರ್ ಪಾಂಡೆ ಅವರನ್ನು 15 ಸದಸ್ಯರ ತಂಡಕ್ಕೆ ಉಪನಾಯಕರನ್ನಾಗಿ ನೇಮಿಸಲಾಗಿದೆ. ಅಂಡರ್ -19 ಏಷ್ಯಾಕಪ್ನಲ್ಲಿ ಎಂಟು ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ.
ಟೂರ್ನಿಯಲ್ಲಿ ಭಾರತವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳವನ್ನು ಎದುರಿಸಲಿದೆ. ಡಿಸೆಂಬರ್ 8 ರಂದು ಐಸಿಸಿ ಅಕಾಡೆಮಿ ಓವಲ್-1 ನಲ್ಲಿ ಆಫ್ಘನ್ ವಿರುದ್ಧದ ಪಂದ್ಯದೊಂದಿಗೆ ಏಷ್ಯಾಕಪ್ ಅಭಿಯಾನವನ್ನು ಭಾರತ ಆರಂಭಿಸಲಿದೆ.ಡಿಸೆಂಬರ್ 10 ರಂದು ಅದೇ ಸ್ಥಳದಲ್ಲಿ ಬಹುನಿರೀಕ್ಷಿತ ಪಾಕಿಸ್ತಾನವನ್ನು ಎದುರಿಸಲಿದೆ ಮತ್ತು ಡಿಸೆಂಬರ್ 12 ರಂದು ನೇಪಾಳವನ್ನು ಎದುರಿಸಲಿದೆ. ಡಿಸೆಂಬರ್ 17 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡ ಇಂತಿದೆ: ಉದಯ್ ಸಹರಾನ್ (ನಾಯಕ), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಧನುಷ್ ಗೌಡ, ಅವಿನಾಶ್ ರಾವ್( ವಿಕೆಟ್ ಕೀಪರ್) ಎಂ ಅಭಿಷೇಕ್, ಇನ್ನೇಶ್ ಮಹಾಜನ್ (ವಾಕ್), ಆರಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


