ICC World Cup 2023 Final: ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತೇ?
45 ದಿನಗಳ ಕ್ರಿಕೆಟ್ ವಿಶ್ವಕಪ್ ಟೂರ್ನಿ ಇಂದು ಅಂತಿಮ ಘಟ್ಟ ತಲುಪಿದ್ದು, ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಭಾರತ- ಆಸ್ಟ್ರೇಲಿಯಾ ತಂಡಗಳು ಸೆಣೆಸಲಿವೆ.

ನವದೆಹಲಿ: 45 ದಿನಗಳ ಕ್ರಿಕೆಟ್ ವಿಶ್ವಕಪ್ ಟೂರ್ನಿ ಇಂದು ಅಂತಿಮ ಘಟ್ಟ ತಲುಪಿದ್ದು, ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಭಾರತ- ಆಸ್ಟ್ರೇಲಿಯಾ ತಂಡಗಳು ಸೆಣೆಸಲಿವೆ.
ಉಭಯ ತಂಡಗಳೂ ಟೂರ್ನಿಯಾದ್ಯಂತ ಅದ್ಭುತ ಪ್ರದರ್ಶನ ನೀಡಿವೆ. ಭಾರತ ಈ ವರೆಗೂ ಎಲ್ಲಾ 10 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ 8 ರಲ್ಲಿ ಜಯಗಳಿಸಿದೆ.
ವಿಜೇತ ತಂಡಕ್ಕೆ ವಿಶ್ವಕಪ್ ಮುಡಿಗೇರುವುದರ ಜೊತೆಗೆ ದೊಡ್ಡ ಮೊತ್ತದ ಬಹುಮಾನವೂ ಸಿಗಲಿದೆ. 2 ನೇ ಸ್ಥಾನದಲ್ಲಿ ನಿಲ್ಲುವ ತಂಡಕ್ಕೂ ಬಹುಮಾನ ನೀಡುವುದಾಗಿ ಐಸಿಸಿ ಹೇಳಿದೆ.
ಐಸಿಸಿಯ ಘೋಷಣೆಯ ಪ್ರಕಾರ ವಿಜೇತ ತಂಡಕ್ಕೆ ಸುಮಾರು 4 ಮಿಲಿಯನ್ ಡಾಲರ್ (33,31,67,000 ರೂಪಾಯಿಗಳು) ಹಾಗೂ ಎರಡನೇ ಸ್ಥಾನದಲ್ಲಿರುವ ತಂಡಕ್ಕೆ 2 ಮಿಲಿಯನ್ ಡಾಲರ್ (16,65,83,500 ರೂಪಾಯಿ) ಸಿಗಲಿದೆ.
ಈ ಎರಡೂ ತಂಡಗಳನ್ನು ಹೊರತುಪಡಿಸಿ, 10 ತಂಡಗಳಿಗೆ 40,000 ಡಾಲರ್ ಸಿಗಲಿದ್ದು, ಟೂರ್ನಿಯ ಒಟ್ಟು ಬಹುಮಾನದ ಮೊತ್ತವೇ 10 ಮಿಲಿಯನ್ ಡಾಲರ್ ಆಗಿದೆ.
ಸೆಮಿ ಫೈನಲ್ಸ್ ನಲ್ಲಿ ಟೂರ್ನಿಯಿಂದ ಹೊರ ನಡೆದ ತಂಡಕ್ಕೆ 800,000 ಡಾಲರ್ ಬಹುಮಾನ, ಗ್ರೂಪ್ ಸ್ಟೇಜ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದ ತಂಡಗಳಿಗೆ (ಒಟ್ಟು 6 ತಂಡಗಳು) 100,000 ಡಾಲರ್ ಬಹುಮಾನ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


