ICC Cricket World Cup 2023: ಧೋನಿ ದಾಖಲೆ ಬೆನ್ನಲ್ಲೇ ಇದೀಗ ದ್ರಾವಿಡ್ ದಾಖಲೆ ಮುರಿಯುವತ್ತ ಕನ್ನಡಿಗ ಕೆಎಲ್ ರಾಹುಲ್ ಚಿತ್ತ!, ಇಷ್ಟಕ್ಕೂ ಏನದು ದಾಖಲೆ?
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ತಂಡದ ಭಾಗವಾಗಿರುವ ಕನ್ನಡಿಗ ಕೆಎಲ್ ರಾಹುಲ್ ಧೋನಿ ದಾಖಲೆ ಮುರಿದು ಇದೀಗ ರಾಹುಲ್ ದ್ರಾವಿಡ್ ರ ವಿಶ್ವಕಪ್ ದಾಖಲೆ ಮುರಿಯುವ ಸನ್ನಾಹದಲ್ಲಿದ್ದಾರೆ.

ಅಹ್ಮದಾಬಾದ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ತಂಡದ ಭಾಗವಾಗಿರುವ ಕನ್ನಡಿಗ ಕೆಎಲ್ ರಾಹುಲ್ ಧೋನಿ ದಾಖಲೆ ಮುರಿದು ಇದೀಗ ರಾಹುಲ್ ದ್ರಾವಿಡ್ ರ ವಿಶ್ವಕಪ್ ದಾಖಲೆ ಮುರಿಯುವ ಸನ್ನಾಹದಲ್ಲಿದ್ದಾರೆ.
ಹೌದು.. ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ವಿಶೇಷ ದಾಖಲೆಯೊಂದರ ತುದಿಯಲ್ಲಿದ್ದು, ನಾಳಿನ ಪಂದ್ಯದಲ್ಲಿ ಈ ದಾಖಲೆ ನಿರ್ಮಿಸುವ ಸಾಧ್ಯತೆ ಇದೆ. ಆದರೆ ರಾಹುಲ್ ಬ್ಯಾಟಿಂಗ್ ನಲ್ಲಿ ಅಲ್ಲ.. ಬದಲಿಗೆ ವಿಕೆಟ್ ಕೀಪಿಂಗ್ ನಲ್ಲಿ ದಾಖಲೆ ಬರೆಯಲಿದ್ದಾರೆ.
ಈ ಬಾರಿಯ ವಿಶ್ವಕಪ್ನ 10 ಪಂದ್ಯಗಳಿಂದ ಕೆಎಲ್ ರಾಹುಲ್ 15 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಹಾಗೆಯೇ ಒಂದು ಸ್ಟಂಪಿಂಗ್ ಮಾಡಿದ್ದಾರೆ. ಈ ಮೂಲಕ 2015 ರ ಏಕದಿನ ವಿಶ್ವಕಪ್ನಲ್ಲಿ 15 ಕ್ಯಾಚ್ಗಳನ್ನು ಹಿಡಿದು ದಾಖಲೆ ಬರೆದಿದ್ದ ಧೋನಿಯ ರೆಕಾರ್ಡ್ ಅನ್ನು ಕೆಎಲ್ ರಾಹುಲ್ ಮುರಿದಿದ್ದಾರೆ. ಅಷ್ಟೇ ಅಲ್ಲದೆ ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಹಿಂದೆ ಒಟ್ಟು 16 ಬಲಿ ಪಡೆದಿದ್ದ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಕೂಡ ಸರಿಗಟ್ಟಿದ್ದಾರೆ. 2003 ರ ವಿಶ್ವಕಪ್ನಲ್ಲಿ ದ್ರಾವಿಡ್ 15 ಕ್ಯಾಚ್ ಮತ್ತು 1 ಸ್ಟಂಪಿಂಗ್ ಮೂಲಕ ಮಿಂಚಿದ್ದರು. ಈ ಮೂಲಕ ವಿಶ್ವಕಪ್ ಆವೃತ್ತಿಯಲ್ಲಿ ಅತೀ ಹೆಚ್ಚು ಯಶಸ್ಸು ಪಡೆದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದರು.
ಇದೀಗ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ. ಒಂದು ವೇಳೆ ಫೈನಲ್ ಪಂದ್ಯದಲ್ಲಿ 1 ಕ್ಯಾಚ್ ಅಥವಾ 1 ಸ್ಟಂಪಿಂಗ್ ಮಾಡಿದರೆ, ಏಕದಿನ ವಿಶ್ವಕಪ್ ಆವೃತ್ತಿಯೊಂದರ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ದಾಖಲೆ ಕೆಎಲ್ ರಾಹುಲ್ ಪಾಲಾಗಲಿದೆ. ಇನ್ನು ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಕೆಎಲ್ ರಾಹುಲ್ 9 ಇನಿಂಗ್ಸ್ಗಳಿಂದ 386 ರನ್ ಕಲೆಹಾಕಿದ್ದಾರೆ. ಈ ಮೂಲಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಜೊತೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಹಾಲಿ ಟೂರ್ನಿಯಲ್ಲಿ ವಿಕೆಟ್ ಕೀಪರ್ ಗಳ ಸಾಧನೆ
20–ಕ್ವಿಂಟನ್ ಡಿ ಕಾಕ್ (19 ಕ್ಯಾಚ್‌ಗಳು, 1 ಸ್ಟಂಪಿಂಗ್) (ದಕ್ಷಿಣ ಆಫ್ರಿಕಾ)
16–ಕೆಎಲ್ ರಾಹುಲ್ (15 ಕ್ಯಾಚ್, 1 ಸ್ಟಂಪಿಂಗ್) (ಭಾರತ)
15–ಸ್ಕಾಟ್ ಎಡ್ವರ್ಡ್ಸ್ (13 ಕ್ಯಾಚ್, 2 ಸ್ಟಂಪಿಂಗ್) (ನೆದರ್ಲೆಂಡ್)
11–ಜೋಸ್ ಬಟ್ಲರ್ (9 ಕ್ಯಾಚ್, 1 ಸ್ಟಂಪಿಂಗ್) (ಇಂಗ್ಲೆಂಡ್)
11–ಜೋಶ್ ಇಂಗ್ಲಿಸ್ (9 ಕ್ಯಾಚ್, 2 ಸ್ಟಂಪಿಂಗ್) (ಆಸ್ಟ್ರೇಲಿಯಾ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


