ಕ್ರಿಕೆಟ್

3ನೇ ಏಕದಿನ: ಗಿಲ್, ಕೊಹ್ಲಿ ಭರ್ಜರಿ ಶತಕ; ಲಂಕಾ ವಿರುದ್ಧ 390 ರನ್ ದಾಖಲೆಯ ಮೊತ್ತ ಕಲೆ ಹಾಕಿದ ಟೀಂ ಇಂಡಿಯಾ

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಲಂಕಾ ವಿರುದ್ಧ 390 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.

3ನೇ ಏಕದಿನ: ಗಿಲ್, ಕೊಹ್ಲಿ ಭರ್ಜರಿ ಶತಕ; ಲಂಕಾ ವಿರುದ್ಧ 390 ರನ್ ದಾಖಲೆಯ ಮೊತ್ತ ಕಲೆ ಹಾಕಿದ ಟೀಂ ಇಂಡಿಯಾ
ಟೀಂ ಇಂಡಿಯಾ
Published On :

ತಿರುವನಂತಪುರಂ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಲಂಕಾ ವಿರುದ್ಧ 390 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.

ತಿರುವನಂತಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 390 ರನ್ ಗಳಿಸಿತು. ಭಾರತ ತಂಡದ ಪರ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಶ್ರೀಲಂಕಾ ಗೆಲುವಿಗೆ 50 ಓವರ್‌ಗಳಲ್ಲಿ 391 ರನ್‌ಗಳ ಗುರಿ ನೀಡಲಾಗಿದೆ. ಆದಾಗ್ಯೂ, ಭಾರತ ತಂಡವು ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವೈಟ್ ವಾಶ್ ಮಾಡುವ ಯೋಜನೆಯಿದೆ.

ಭಾರತದ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 49 ಎಸೆತಗಳಲ್ಲಿ 42 ರನ್ ಗಳಿಸಿದರು. ಆದರೆ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿದರು. ಶುಭಮನ್ ಗಿಲ್ 89 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟಾರೆ 97 ಎಸೆತಗಳಲ್ಲಿ 116 ರನ್‌ ಗಳಿಸಿ ಔಟಾದರು. ಶುಬ್ಮನ್ ಗಿಲ್ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ 85 ಎಸೆತಗಳಲ್ಲಿ 46ನೇ ಏಕದಿನ ಶತಕ ಪೂರೈಸಿದರು. ವಿರಾಟ್ ಕೊಹ್ಲಿ ಒಟ್ಟಾರೆ 110 ಎಸೆತಗಳಲ್ಲಿ 8 ಸಿಕ್ಸರೆ 13 ಬೌಂಡರಿಯೊಂದಿಗೆ ಅಜೇಯ 166 ರನ್ ಬಾರಿಸಿದರು.

ಅದೇ ಸಮಯದಲ್ಲಿ, ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ 38 ರನ್ ಕೊಡುಗೆ ನೀಡಿದರು. ನಂತರ ಬಂದ ಕೆಎಲ್ ರಾಹಲ್ 7 ಮತ್ತು ಸೂರ್ಯಕುಮಾರ್ ಯಾದವ್ 4 ರನ್ ಗೆ ಔಟಾದರು. 

ಲಂಕಾ ಪರ ರಜಿತಾ ಮತ್ತು ಲಹಿರು ಕುಮಾರಾ ತಲಾ ಎರಡು ವಿಕೆಟ್ ಪಡೆದರೆ ಕರುಣರತ್ನೆ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.