ಕ್ರಿಕೆಟ್

ಗೆಲುವಿನ ಸನಿಹದಲ್ಲಿ ಎಡವಿದ ಭಾರತ; 2ನೇ ಟಿ20 ಪಂದ್ಯ ಗೆದ್ದ ಲಂಕಾ; ಸರಣಿ ಸಮಬಲ 

ಪುಣೆಯಲ್ಲಿ ನಡೆದ ಭಾರತ- ಲಂಕಾ ನಡುವಿನ 2 ನೇ ಟಿ20 ಪಂದ್ಯದಲ್ಲಿ ಲಂಕಾ ಭಾರತದ ವಿರುದ್ಧ 16 ರನ್ ಗಳ ಜಯ ದಾಖಲಿಸಿದೆ.

ಗೆಲುವಿನ ಸನಿಹದಲ್ಲಿ ಎಡವಿದ ಭಾರತ; 2ನೇ ಟಿ20 ಪಂದ್ಯ ಗೆದ್ದ ಲಂಕಾ; ಸರಣಿ ಸಮಬಲ 
ಶ್ರೀಲಂಕಾ ತಂಡ
Published On :

ಪುಣೆ: ಪುಣೆಯಲ್ಲಿ ನಡೆದ ಭಾರತ- ಲಂಕಾ ನಡುವಿನ 2 ನೇ ಟಿ20 ಪಂದ್ಯದಲ್ಲಿ ಲಂಕಾ ಭಾರತದ ವಿರುದ್ಧ 16 ರನ್ ಗಳ ಜಯ ದಾಖಲಿಸಿದೆ. 

ಲಂಕಾ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ 207 ರನ್ ಗಳ ಬೃಹತ್ ಗುರಿ ನೀಡಿತ್ತು.  ಭಾರತದ ಆರಂಭಿಕ ಆಟಗಾರರು ಬೇಗ ವಿಕೆಟ್ ಒಪ್ಪಿಸಿದ್ದು ಆರಂಭದಲ್ಲಿ ಭಾರತಕ್ಕೆ ಹಿನ್ನೆಡೆಯಾಗಿತ್ತು.  

9 ನೇ ಓವರ್‌ ವೇಳೆಗೆ 57 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದರಿಂದ ಭಾರತದ ಗೆಲುವಿನ ಆಸೆ ಮರೀಚಿಕೆಯಾಗಿತ್ತು. ಆದರೆ ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಜೊತೆಯಾಟದ ಪರಿಣಾಮ ಭಾರತದ ಗೆಲುವಿನ ಆಸೆ  ಜೀವಂತವಾಗಿತ್ತು. 41 ಎಸೆತಗಳಲ್ಲಿ ಅಕ್ಷರ್ ಪಟೇಲ್ ಹಾಗೂ ಸೂರ್ಯ ಕುಮಾರ್ ಯಾದವ್ ಅವರ  91 ರನ್‌ ಜೊತೆಯಾಟದ ಪರಿಣಾಮ ಭಾರತ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಭಾರತ 8 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿ ಸೋಲು ಅನುಭವಿಸಿತು.

ಇಡೀ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗಿದ್ದು ಒಟ್ಟು 26 ಸಿಕ್ಸರ್ ಹಾಗೂ 21 ಬೌಂಡರಿಗಳು ದಾಖಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.