ಎರಡನೇ ಟಿ20 ಪಂದ್ಯ: ಲಂಕಾ ಸ್ಫೋಟಕ ಬ್ಯಾಟಿಂಗ್; ಭಾರತಕ್ಕೆ 207 ರನ್ ಗಳ ಬೃಹತ್ ಗುರಿ
ಎರಡನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶ್ರೀಲಂಕಾ ಭಾರತಕ್ಕೆ 207 ರನ್ಗಳ ಬೃಹತ್ ಗುರಿ ನೀಡಿದೆ.

ಪುಣೆ: ಎರಡನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶ್ರೀಲಂಕಾ ಭಾರತಕ್ಕೆ 207 ರನ್ಗಳ ಬೃಹತ್ ಗುರಿ ನೀಡಿದೆ.
ಈ ಪಂದ್ಯದ ಆರಂಭದಲ್ಲಿ ಉತ್ತಮ ಒಪನಿಂಗ್ ಪಡೆದ ಶ್ರೀಲಂಕಾ ಬಳಿಕ ಮಧ್ಯಮ ಓವರ್ಗಳಲ್ಲಿ ತತ್ತರಿಸಿದರೂ ಕೊನೆಯಲ್ಲಿ ನಾಯಕ ದಸುನ್ ಶನಕ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಸ್ಕೋರನ್ನು 206 ರನ್ಗಳಿಗೆ ಕೊಂಡೊಯ್ದರು.
ಶ್ರೀಲಂಕಾ ಪರ ಕುಶಾಲ್ ಮೆಂಡಿಸ್ ಮತ್ತು ದಸುನ್ ಶನಕ ಅರ್ಧಶತಕ ಗಳಿಸಿದರು. ಭಾರತದ ಪರ ಉಮ್ರಾನ್ ಮಲಿಕ್ ಮೂರು ವಿಕೆಟ್ ಪಡೆದರು.
ಲಂಕಾ ಪರ ಬ್ಯಾಟಿಂಗ್ ನಲ್ಲಿ ನಿಶಾಂಕ್ 33, ಕೌಸಲ್ ಮೆಂಡಿಸ್ 52, ಚರಿತಾ ಅಸಲಂಕಾ 37 ಹಾಗೂ ದುಸನ್ ಶಂಕರ ಅಜೇಯ 56 ರನ್ ಪೇರಿಸಿದ್ದಾರೆ.
ಭಾರತ ಪರ ಬೌಲಿಂಗ್ ನಲ್ಲಿ ಉಮ್ರಾನ್ ಮಲಿಕ್ 3, ಅಕ್ಷರ್ ಪಟೇಲ್ 2 ಮತ್ತು ಯುಜುವೇಂದ್ರ ಚಹಾಲ್ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


