ಕ್ರಿಕೆಟ್

ಡಿಸೆಂಬರ್ 6: ಭಾರತದ ನಾಲ್ವರು ಕ್ರಿಕೆಟಿಗರು ಸೇರಿ ಕ್ರಿಕೆಟ್ ಜಗತ್ತಿನ 6 ತಾರೆಯರ ಜನ್ಮದಿನ ಇಂದು

ಭಾರತದ 4 ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಖ್ಯಾತಿ ಗಳಿಸಿದ ಆರು ಆಟಗಾರರ ಜನ್ಮ ದಿನ ಇಂದು.

ಡಿಸೆಂಬರ್ 6: ಭಾರತದ ನಾಲ್ವರು ಕ್ರಿಕೆಟಿಗರು ಸೇರಿ ಕ್ರಿಕೆಟ್ ಜಗತ್ತಿನ 6 ತಾರೆಯರ ಜನ್ಮದಿನ ಇಂದು
ಜನ್ಮದಿನ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು
Published On :

ನವದೆಹಲಿ: ಭಾರತದ 4 ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಖ್ಯಾತಿ ಗಳಿಸಿದ ಆರು ಆಟಗಾರರ ಜನ್ಮ ದಿನ ಇಂದು.

ಹೌದು.. ಭಾರತದ ಖ್ಯಾತನಾಮ ಕ್ರಿಕೆಟಿಗರಾದ ಆಲ್ ರೌಂಡರ್ ರವೀಂದ್ರ ಜಡೇಜಾ, ಜಸ್ ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಮಾಜಿ ಆಟಗಾರ ಆರ್ ಪಿಸಿಂಗ್ ಗೆ ಇಂದು ಜನ್ಮದಿನ ಸಂಭ್ರಮ. ಭಾರತೀಯ ಆಟಗಾರರು ಮಾತ್ರವಲ್ಲದೇ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಆ್ಯಂಡ್ರ್ಯೂ ಫ್ಲಿಂಟಾಫ್, ನ್ಯೂಜಿಲೆಂಡ್ ಸ್ಫೋಟಕ ಆಟಗಾರ ಗ್ಲೇನ್ ಫಿಲಿಪ್ಸ್ ಹುಟ್ಟಿದ್ದು ಕೂಡ ಇದೇ ದಿನ ಎಂಬುದು ವಿಶೇಷ.

ಭಾರತದ ಮೂರು ಬಗೆಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಹುಟ್ಟಿದ್ದು ಡಿಸೆಂಬರ್ 6 1988ರಲ್ಲಿ. ಅಂತೆಯೇ ಭೂಮ್ ಭೂಮ್ ಬುಮ್ರಾ ಎಂದೇ ಖ್ಯಾತಿ ಗಳಿಸಿರುವ ಮಾರಕ ವೇಗಿ ಜಸ್ ಪ್ರೀತ್ ಬುಮ್ರಾ ಹುಟ್ಟಿದ್ದು ಡಿಸೆಂಬರ್ 6 1993ರಲ್ಲಿ, ಫಾರ್ಮ್ ಕಳೆದುಕೊಂಡು ತಂಡದಿಂದಾ ದೂರಾಗಿ ಇತ್ತೀಚೆಗೆ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿರುವ ತಂಡದ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಹುಟ್ಟಿದ್ದು ಇದೇ ದಿನ. ಅಯ್ಯರ್ ಹುಟ್ಟಿದ್ದು ಡಿಸೆಂಬರ್ 6 1994ರಲ್ಲಿ..

ಭಾರತ ಮಾತ್ರವಲ್ಲದೇ ಈ ಹಿಂದೆ ಇಂಗ್ಲೆಂಡ್ ತಂಡದ ಅವಿಭಾಜ್ಯ ಅಂಗವಾಗಿದ್ದ ಸ್ಟಾರ್ ಆಲ್ರೌಂಡರ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಆ್ಯಂಡ್ರ್ಯೂ ಫ್ಲಿಂಟಾಫ್ ಗೂ ಕೂಡ ಇಂದು ಜನ್ಮದಿನದ ಸಂಭ್ರಮ. ಫ್ಲಿಂಟಾಫ್ ಹುಟ್ಟಿದ್ದು ಡಿಸೆಂಬರ್ 6 1977ರಲ್ಲಿ, ಇತ್ತ ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್ ವೆಲ್ ಗೂ ಇಂದು ಜನ್ಮ ದಿನವಾಗಿದ್ದು ಅವರು ಡಿಸೆಂಬರ್ 6 1996ರಲ್ಲಿ ಜನಿಸಿದ್ದರು. ಈ ಎಲ್ಲ ಆರೂ ಮಂದಿ ಕ್ರಿಕೆಟಿಗರಿಗೆ ಜನ್ಮದಿನದ ಶುಭಾಶಯಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.