ಕ್ರಿಕೆಟ್

ಐಪಿಎಲ್ 2023: ಸತತ ಎರಡನೇ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ 5 ವಿಕೆಟ್ ಭರ್ಜರಿ ಜಯ

ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಸೋಲಿನ ಸುಳಿಯಿಂದ ಹೊರಬಂದಿದೆ. ಇದೇ ವೇಳೆ ಕೋಲ್ಕತ್ತಾ ಮೂರನೇ ಸೋಲನ್ನು ಅನುಭವಿಸಿದೆ.

ಐಪಿಎಲ್ 2023: ಸತತ ಎರಡನೇ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ 5 ವಿಕೆಟ್ ಭರ್ಜರಿ ಜಯ
ಮುಂಬೈ ಇಂಡಿಯನ್ಸ್ ತಂಡ
Published On :

ಮುಂಬೈ: ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಸೋಲಿನ ಸುಳಿಯಿಂದ ಹೊರಬಂದಿದೆ. ಇದೇ ವೇಳೆ ಕೋಲ್ಕತ್ತಾ ಮೂರನೇ ಸೋಲನ್ನು ಅನುಭವಿಸಿದೆ. 

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 185 ರನ್ ಪೇರಿಸಿತ್ತು. ಇನ್ನು ಮುಂಬೈ 14 ಎಸೆತಗಳು ಬಾಕಿ ಇರುವಂತೆಯೇ 186 ರನ್ ಪೇರಿಸಿ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿತು.

ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ ಭರ್ಜರಿ ಶತಕ (104 ರನ್) ಗಳಿಸಿದರು. ಅದೇ ವೇಳೆ ಮುಂಬೈ ಪರ ಹೃತಿಕ್ ಶೋಕೀನ್ ಎರಡು ವಿಕೆಟ್ ಪಡೆದರು. ಇದರ ನಂತರ ಇಶಾನ್ ಕಿಶನ್ 58 ಮತ್ತು ಸೂರ್ಯಕುಮಾರ್ 43 ರನ್ ಗಳಿಸಿದ್ದು ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು.

ಈ ಟೂರ್ನಿಯಲ್ಲಿ ಮುಂಬೈಗೆ ಇದು ಸತತ ಎರಡನೇ ಗೆಲುವಾಗಿದೆ. ಅದೇ ಸಮಯದಲ್ಲಿ ಕೋಲ್ಕತ್ತಾ ತನ್ನ ಮೂರನೇ ಸೋಲು ಕಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.