ಐಪಿಎಲ್ 2023 16 ನೇ ಪಂದ್ಯ: ಡೆಲ್ಲಿ ವಿರುದ್ಧ ಮುಂಬೈ ತಂಡಕ್ಕೆ 6 ವಿಕೆಟ್ ಗೆಲುವು
ಐಪಿಎಲ್ ನ ಆವೃತ್ತಿಯ 16 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್- ಮುಂಬೈ ನಡುವಿನ ಪಂದ್ಯದಲ್ಲಿ ಮುಂಬೈ ತಂಡ 6 ವಿಕೆಟ್ ಗಳ ಜಯ ಗಳಿಸಿದೆ.

ನವದೆಹಲಿ: ಐಪಿಎಲ್ ನ ಆವೃತ್ತಿಯ 16 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್- ಮುಂಬೈ ನಡುವಿನ ಪಂದ್ಯದಲ್ಲಿ ಮುಂಬೈ ತಂಡ 6 ವಿಕೆಟ್ ಗಳ ಜಯ ಗಳಿಸಿದೆ.
ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ ಡೆಲ್ಲಿ ತಂಡವನ್ನು 19.4 ಓವರ್ ಗಳಲ್ಲಿ 172 ರನ್ ಗಳಿಗೆ ಕಟ್ಟಿ ಹಾಕಿತ್ತು.
ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (45 ಎಸೆತಗಳಲ್ಲಿ 65 ರನ್) ಇಶಾನ್ ಕಿಶನ್ (26 ಎಸೆತಗಳಲ್ಲಿ 31 ರನ್) ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬಳಿಕ ತಿಲಕ್ ವರ್ಮ ಸಹ 29 ಎಸೆತಗಳಲ್ಲಿ 41 ರನ್ ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಆದರೆ ಸೂರ್ಯ ಕುಮಾರ್ ಯಾದವ್ ರನ್ ಗಳಿಸದೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು, ಕೊನೆಯಲ್ಲಿ ಟಿಮ್ ಡೇವಿಡ್ (11 ಎಸೆತಗಳಲ್ಲಿ 13 ರನ್) ಕ್ಯಾಮರೋನ್ ಗ್ರೀನ್ (8 ಎಸೆತಗಳಲ್ಲಿ 17 ರನ್) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ನೆನ್ನೆಯ ಆರ್ ಸಿಬಿ-ಎಲ್ ಎಸ್ ಜಿ ನಡುವಿನ ಪಂದ್ಯದಂತೆಯೇ ಈ ಪಂದ್ಯದಲ್ಲೂ ಗೆಲುವು ಕೊನೆಯ ಕ್ಷಣದವರೆಗೂ ಕುತೂಹಲಕಾರಿಯಾಗಿತ್ತು. ಡೆಲ್ಲಿ ತಂಡಕ್ಕೆ 18 ನೇ ಓವರ್ ನ ಕೊನೆಯ ಒಂದೇ ಎಸೆತದಲ್ಲಿ ಮುಸ್ತಾಫಿಜುರ್ ರೆಹಮಾನ್ 6 ರನ್ ನೀಡಿದ್ದು ಪಂದ್ಯದ ಗತಿಯನ್ನೇ ಬದಲಿಸಿತು ಹಾಗೂ 19. 5 ನೇ ಎಸೆತದಲ್ಲಿ ಒಂದು ರನ್ ಔಟ್ ವಿಫಲವಾಗಿದ್ದೂ ಸಹ ಡೆಲ್ಲಿ ತಂಡದ ಸೋಲಿಗೆ ಕಾರಣವಾಯಿತು. ಪರಿಣಾಮ ಮುಂಬೈ ತಂಡ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಗೆಲುವು ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


