'ಕನಸು ನನಸಾಯಿತು': ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ ನಲ್ಲಿ ಹಾಂಕಾಂಗ್ ಆಟಗಾರರ ಸಂಭ್ರಮ, ವಿಡಿಯೋ ವೈರಲ್!
ಏಷ್ಯಾ ಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ ಹಾಂಕಾಂಗ್ ಸೋಲಿನ ಕಹಿ ಅನುಭವಿಸಿರಬಹುದು ಆದರೆ ಪಂದ್ಯದ ನಂತರ ಭಾರತೀಯ ಆಟಗಾರರನ್ನು ಭೇಟಿ ಮಾಡಿ, ಮಾತನಾಡುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ದುಬೈ: ಏಷ್ಯಾ ಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ ಹಾಂಕಾಂಗ್ ಸೋಲಿನ ಕಹಿ ಅನುಭವಿಸಿರಬಹುದು ಆದರೆ ಪಂದ್ಯದ ನಂತರ ಭಾರತೀಯ ಆಟಗಾರರನ್ನು ಭೇಟಿ ಮಾಡಿ, ಮಾತನಾಡುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.
ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಹಾಂಕಾಂಗ್ ತಂಡ ಮೈದಾನದಲ್ಲಿ ಬಲಿಷ್ಠ ಭಾರತದ ವಿರುದ್ಧ 40 ರನ್‌ಗಳಿಂದ ಸೋಲು ಅನುಭವಿಸಿತ್ತು. ಆದರೆ ಇದರ ಬೆನ್ನಲ್ಲೇ ಹಾಂಗ್ ಕಾಂಗ್ ಕ್ರಿಕೆಟಿಗರಿಗೆ 'ಜೀವಮಾನ'ದ ಅವಕಾಶ ಸಿಕ್ಕಿತ್ತು. ಅದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರ ಆಟಗಾರರನ್ನು ಭೇಟಿ ಮಾಡುವ ಅವಕಾಶ. ಈ ವೇಳೆ ಹಾಂಕಾಂಗ್ ಆಟಗಾರರು ಭಾರತದ ಆಟಗಾರರ ಜೊತೆ ಚರ್ಚಿಸಿದ್ದು ಅಲ್ಲದೆ ಜೆರ್ಸಿಯ ಮೇಲೆ ಆಟೋಗ್ರಾಫ್, ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.
ಆಟಗಾರರು ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಎಲ್ಲಾ ಆಟಗಾರರೊಂದಿಗೆ, ವಿಶೇಷವಾಗಿ ವಿರಾಟ್ ಮತ್ತು ರೋಹಿತ್ ಅವರೊಂದಿಗೆ ಮಾತನಾಡಿದರು. ಅಂತಹ ಕ್ಷಣಗಳು ನಮಗೆ ಆಗಾಗ್ಗೆ ಬರುವುದಿಲ್ಲ, ಆದ್ದರಿಂದ ಇದು ಕನಸು ನನಸಾಯಿತು ಎಂದು ಹೆಚ್ಚು ರನ್ ಸಿಡಿಸಿದ್ದ ಮಾಡಿದ ಬಾಬರ್ ಹಯಾತ್(41) ಹೇಳಿದರು.
ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಹಾಂಗ್ ಕಾಂಗ್ ನಾಯಕ ನಿಜಾಖತ್ ಖಾನ್ ಅವರು ತಮ್ಮ ಭಾರತೀಯ ಸಹವರ್ತಿ ರೋಹಿತ್ ಶರ್ಮಾ ಅವರಿಂದ ಹಸ್ತಾಕ್ಷರದ ಜೆರ್ಸಿಯನ್ನು ಸ್ವೀಕರಿಸಿದರು. ಇದೇ ವೇಳೆ ಸೂರ್ಯಕುಮಾರ್ ಯಾದವ್ ಇದೇ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟ್ ಮೇಲೆ ಆಟೋಗ್ರಾಫ್ ಹಾಕಿ ಕೊಟ್ಟರು.
ಇನ್ನು ತಂಡ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ ಸೇರಿದಂತೆ ಇತರರೊಂದಿಗೆ ಸುದೀರ್ಘವಾಗಿ ಮಾತನಾಡಿ ತೆರಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


