ಕ್ರಿಕೆಟ್

ಐಸಿಸಿ ಟಿ20 ವಿಶ್ವಕಪ್: ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಪಾಕಿಸ್ತಾನ ಫೈನಲ್ ಗೆ ಲಗ್ಗೆ

ನ್ಯೂಜಿಲ್ಯಾಂಡ್ ತಂಡವನ್ನು ಮಣಿಸುವ ಮೂಲಕ ಪಾಕಿಸ್ತಾನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಗೆ ಪ್ರವೇಶಿಸಿದೆ.

ಐಸಿಸಿ ಟಿ20 ವಿಶ್ವಕಪ್: ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಪಾಕಿಸ್ತಾನ ಫೈನಲ್ ಗೆ ಲಗ್ಗೆ
ಪಾಕಿಸ್ತಾನ ತಂಡ
Published On :

ಸಿಡ್ನಿ: ನ್ಯೂಜಿಲ್ಯಾಂಡ್ ತಂಡವನ್ನು ಮಣಿಸುವ ಮೂಲಕ ಪಾಕಿಸ್ತಾನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಗೆ ಪ್ರವೇಶಿಸಿದೆ. 

ಸಿಡ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ್ದ 153 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಇನ್ನು 5 ಎಸೆತ ಬಾಕಿ ಇರುವಂತೆ 153 ರನ್ ಪೇರಿಸಿ ಗೆಲುವಿನ ನಗೆ ಬೀರಿದೆ. ಪಾಕಿಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಾಂ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. 

ಮೊಹಮ್ಮದ್ ರಿಜ್ವಾನ್ 57 ರನ್ ಬಾರಿಸಿದ್ದರೆ ಬಾಬರ್ ಅಜಾಂ 53 ರನ್ ಗಳಿಸಿ ಔಟಾದರು. ನಂತರ ಬಂದ ಮೊಹಮ್ಮದ್ ಹ್ಯಾರಿಸ್ 30 ಹಾಗೂ ಶಾನ್ ಮಸೂದ್ ಅಜೇಯ 3 ರನ್ ಬಾರಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತ್ತು. ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 4, ಡೆವೊನ್ ಕಾನ್ವೇ 21, ಕೇನ್ ವಿಲಿಯಮ್ಸನ್  46, ಗ್ಲೆನ್ ಫಿಲಿಪ್ಸ್ 6 ಡೇರಿಲ್ ಮಿಚೆಲ್ ಅಜೇಯ 53 ಜೇಮ್ಸ್ ನೀಶಮ್ ಅಜೇಯ 16 ರನ್ ಪೇರಿಸಿದ್ದಾರೆ.

ಪಾಕ್ ಪರ ಬೌಲಿಂಗ್ ನಲ್ಲಿ ಶಾಹೀನ್ ಶಾ ಆಫ್ರಿದಿ 2 ಮತ್ತು ಮೊಹಮ್ಮದ್ ನವಾಜ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.