2ನೇ ಟಿ20: ಐರ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಜೊತೆಯಾಟದಲ್ಲಿ ದಾಖಲೆ ಬರೆದ ಹೂಡಾ-ಸ್ಯಾಮ್ಸನ್!
ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಭರ್ಜರಿ ದಾಖಲೆ ಬರೆದಿದೆ.

ಡಬ್ಲಿನ್: ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಭರ್ಜರಿ ದಾಖಲೆ ಬರೆದಿದೆ.
ಹೌದು...ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಮಾರ್ಕ್ ಅಡೇರ್ ಆರಂಭಿಕ ಆಘಾತ ನೀಡಿದ್ದರು. ಈ ಹಂತದಲ್ಲಿ ಭಾರತದ ಪರ ಎರಡನೇ ವಿಕೆಟ್ಗೆ ಜೊತೆಯಾದ ದೀಪಕ್ ಹೂಡಾ ಮತ್ತು ಸ್ಯಾಮ್ಸನ್ ದಾಖಲೆಯ 176 ರನ್ ಸೇರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 77 ರನ್ ಸಿಡಿಸಿದರೆ, 2 ವಿಕೆಟ್ ಗೆ ಸ್ಯಾಮ್ಸನ್ ಜೊತೆಗೂಡಿದ ದೀಪಕ್ ಹೂಡಾ 57 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿಗಳ ನೆರವಿನಿಂದ 104ರನ್ ಸಿಡಿಸಿದರು. ಅಂತೆಯೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದ ಭಾರತದ 4ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಈ ಜೋಡಿ 3ನೇ ವಿಕೆಟ್ ಗೆ 176ರನ್ ಕಲೆ ಹಾಕಿತು. ಟಿ20 ಪಂದ್ಯದಲ್ಲಿ ಭಾರತದ ಪರ ದಾಖಲಾದ ಅತಿದೊಡ್ಡ ಜತೆಯಾಟ ಇದಾಗಿದೆ. ಈ ಮೈಲಿಗಲ್ಲಿನ ಮೂಲಕ, 2017 ರಲ್ಲಿ ಇಂದೋರ್ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಹೆಸರಿಲ್ಲಿದ್ದ 165 ರನ್ ಗಳ ಜೊತೆಯಾಟದ ದಾಖಲೆಯನ್ನು ಇವರಿಬ್ಬರ ಜೋಡಿ ಮುರಿದಂತಾಗಿದೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಇದೇ ಡಬ್ಲಿನ್ ನಲ್ಲಿ, 2018 ರಲ್ಲಿ ಐರ್ಲೆಂಡ್ ವಿರುದ್ಧ (1ನೇ ವಿಕೆಟ್) 160 ರನ್ ಜೊತೆಯಾಟವಾಡಿದ್ದು, ಇದರೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


