ಐಪಿಎಲ್ ಟಿವಿ ಮತ್ತು ಡಿಜಿಟಲ್ ಹಕ್ಕುಗಳು ದಾಖಲೆಯ 44,075 ಕೋಟಿ ರೂ. ಗೆ ಮಾರಾಟ!
ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ನ ಟಿವಿ ಮತ್ತು ಡಿಜಿಟಲ್ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬೊಕ್ಕಸಕ್ಕೆ ಭಾರಿ ಮೊತ್ತ ಹರಿದು ಬಂದಿದೆ.

ಮುಂಬೈ: ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ನ ಟಿವಿ ಮತ್ತು ಡಿಜಿಟಲ್ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬೊಕ್ಕಸಕ್ಕೆ ಭಾರಿ ಮೊತ್ತ ಹರಿದು ಬಂದಿದೆ.
ಐಪಿಎಲ್ 2023ರಿಂದ 2027ರವರೆಗಿನ ಎಲ್ಲಾ 410 ಪಂದ್ಯಗಳ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಬಿಸಿಸಿಐ ಇದೇ ಮೊದಲ ಬಾರಿಗೆ ತನ್ನ ಪ್ರಸಾರ ಹಕ್ಕುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಮಾರಾಟ ಮಾಡಿದೆ.
ಬಿಡ್-ವಿಜೇತರ ಹೆಸರುಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ ಮಾಧ್ಯಮಗಳ ವರದಿಗಳ ಪ್ರಕಾರ, ಟಿವಿ ಹಕ್ಕುಗಳನ್ನು ಸೋನಿ ₹ 23,575 ಕೋಟಿಗೆ ಹಾಗೂ ಡಿಜಿಟಲ್ ಹಕ್ಕುಗಳನ್ನು Viacom18 ₹ 20,500 ಕೋಟಿಗೆ ಗೆದ್ದಿದೆ ಎಂದು ವರದಿಯಾಗಿದೆ.
ಭಾರತೀಯ ಟೆಲಿವಿಷನ್ ಹಕ್ಕುಗಳು ಪ್ರತಿ ಪಂದ್ಯಕ್ಕೆ ₹ 57.5 ಕೋಟಿಗೆ ಮಾರಾಟವಾಗಿದ್ದರೆ, ಇಂಟರ್ನೆಟ್ ಹಕ್ಕುಗಳು ಪ್ರತಿ ಪಂದ್ಯಕ್ಕೆ ₹ 50 ಕೋಟಿಗೆ ಮಾರಾಟವಾಗಿವೆ. ಪ್ರತಿ ಪಂದ್ಯದ ಟಿವಿ ಮತ್ತು ಇಂಟರ್ನೆಟ್ ಹಕ್ಕುಗಳ ಮೌಲ್ಯ ₹107.5 ಕೋಟಿ ಆಗಿದೆ.
2017ರಲ್ಲಿ ಸ್ಟಾರ್ BCCIಗೆ ₹ 16,347 ಕೋಟಿ ಪಾವತಿಸಿತ್ತು. ಮಾಧ್ಯಮ ಹಕ್ಕುಗಳ ಮೂಲ ಬೆಲೆ ₹ 32,890 ಕೋಟಿ ಆಗಿದ್ದು, BCCI ಈ ಋತುವಿನಲ್ಲಿ ಕನಿಷ್ಠ ಎರಡು ಪಟ್ಟು ಹೆಚ್ಚು ಹಣವನ್ನು ಪಡೆಯುತ್ತದೆ ಎಂದು ಅಂದಾಜಿಸಲಾಗಿತ್ತು. ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ₹ 44,075 ಕೋಟಿಗೆ ಹರಾಜು ಮಾಡಲಾಗಿದೆ (2017 ರಲ್ಲಿ ಸ್ಟಾರ್ ಪಾವತಿಸಿದ್ದಕ್ಕಿಂತ ಸುಮಾರು ಮೂರು ಪಟ್ಟು) ಈಗ ಬಿಸಿಸಿಐ ₹ 50,000 ಕೋಟಿಗಿಂತ ಹೆಚ್ಚು ಗಳಿಸುವ ಹಾದಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


