ಭಾರತ ಟಿ20 ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡುವ ಬ್ಯಾಟರ್‌ಗಳ ಅಗತ್ಯವಿದೆ: ಅನಿಲ್ ಕುಂಬ್ಳೆ
ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು ಕಂಡ ನಂತರ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ನವದೆಹಲಿ: ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು ಕಂಡ ನಂತರ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ಬಿರುಸಿನ ಹೊಡೆತೆಗಳನ್ನು ಸಿಡಿಸುವ ಬ್ಯಾಟರ್ ಗಳು ಬೌಲಿಂಗ್ ಸಹ ಮಾಡುವ ಸಾಮರ್ಥ್ಯವೊಂದಿದ್ದರೆ ಟೀಂ ಇಂಡಿಯಾ ಟಿ20 ಕ್ರಿಕೆಟ್ ನಲ್ಲಿ ಸಮತೋಲನ ಕಾಯ್ದುಕೊಳ್ಳಲಿದೆ ಎಂದು ಭಾರತದ ಮಾಜಿ ಕೋಚ್ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ.
ಗುರುವಾರ ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಪವರ್ ಹಿಟರ್‌ಗಳಾದ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಟೀಂ ಇಂಡಿಯಾ ಬೌಲರ್ ಗಳು ಪತರಗುಟ್ಟಿ ಹೋಗಿದ್ದರು. ಭಾರತದ ಅಂಜುಬುರುಕ ಬ್ಯಾಟಿಂಗ್ ವಿಧಾನವು ಎಲ್ಲಾ ಭಾಗಗಳಿಂದ ಟೀಕೆಗಳಿಗೆ ಗುರಿಯಾಗಿದೆ. ಇನ್ನು ಈ ಸೋಲು ICC ಪ್ರಮುಖ ಈವೆಂಟ್‌ನಿಂದ ತಂಡವನ್ನು ಹೊರದಬ್ಬಿದೆ.
ಬೌಲರ್‌ಗಳು ಬ್ಯಾಟಿಂಗ್ ಮಾಡುವ ಅಗತ್ಯವಿದೆ ಎಂದು ನಾವು ಹೇಗೆ ಮಾತನಾಡುತ್ತೇವೋ. ಅದೇ ರೀತಿ ಭಾರತೀಯ ಕ್ರಿಕೆಟ್‌ನಲ್ಲಿ ತಂಡದ ಸಮತೋಲನಕ್ಕಾಗಿ ಬೌಲಿಂಗ್ ಮಾಡುವ ಬ್ಯಾಟರ್‌ಗಳು ಕೂಡಬೇಕು ಎಂದು ಕುಂಬ್ಳೆ ಹೇಳಿದರು. ಈ ವಿಚಾರದಲ್ಲಿ ಇಂಗ್ಲೆಂಡ್ ನಿಖರವಾಗಿತ್ತು. ಅವರಿಗೆ ಹಲವು ಆಯ್ಕೆಗಳಿದ್ದವು. ಅವರು ಲಿಯಾಮ್ ಲಿವಿಂಗ್ ಸ್ಟೋನ್‌ನನ್ನು ಬಳಸಿಕೊಂಡರು. ಭಾರತ ತಂಡಗಳ ಆಯ್ಕೆಯಲ್ಲಿ ಕುಂಬ್ಳೆ ತಪ್ಪು ಕಂಡುಕೊಂಡಿದ್ದು, ಈಗಿನ ಟ್ರೆಂಡ್ ಬದಲಾಗಬೇಕಿದೆ ಎಂದಿದ್ದಾರೆ.
'ದುರದೃಷ್ಟವಶಾತ್ ಭಾರತ ಎ ತಂಡದಲ್ಲಿ ಆಯ್ಕೆಯಾಗಿರುವ ಹೆಚ್ಚಿನ ಬ್ಯಾಟರ್‌ಗಳು ಬೌಲಿಂಗ್ ಮಾಡುವುದಿಲ್ಲ. ಆ ಬ್ರಾಂಡ್ ಕ್ರಿಕೆಟ್ ಅನ್ನು ರಚಿಸುವುದು ಮುಖ್ಯವಾಗಿದೆ. ಭಾರತ ತಂಡವು ಅದನ್ನು ಮಾಡಲಿ ಎಂದು ಸಲಹೆ ನೀಡಿದರು.
ನೀವು ಹೆಚ್ಚು ಹೆಚ್ಚು ಟಿ20 ಆಡುತ್ತೀರಿ. ಅಲ್ಲಿ ಬಂದು ನೀವು ನಿಮ್ಮ ಶಕ್ತಿಯನ್ನು ತೋರಿಸುತ್ತೀರಿ. ಇದು ಟಿ20ಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬ ಆಟಗಾರನು ತನಗೆ ವಹಿಸಲಾದ ನಿರ್ದಿಷ್ಟ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ಅಂತಿಮಗೊಳಿಸಿದ ನಂತರ ತಂಡವು ಅದಕ್ಕೆ ಅಂಟಿಕೊಳ್ಳಬೇಕು ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಆ ಪಾತ್ರವನ್ನು ಕೇವಲ ರಾಷ್ಟ್ರೀಯ ತಂಡಕ್ಕೆ ಸೀಮಿತಗೊಳಿಸಬಾರದು. ಆಟಗಾರರು ಅದೇ ಮನಸ್ಥಿತಿಯೊಂದಿಗೆ ದೇಶೀಯ ಕ್ರಿಕೆಟ್‌ಗೆ ಮರಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


