ಕ್ರಿಕೆಟ್

2ನೇ ಏಕದಿನ ಪಂದ್ಯ: ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್ ಆಯ್ಕೆ, ಆವೇಶ್ ಖಾನ್ ಪದಾರ್ಪಣೆ

ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತದ ಪರ ಆವೇಶ್ ಖಾನ್ ಪದಾರ್ಪಣೆ ಮಾಡಲಿದ್ದಾರೆ.

2ನೇ ಏಕದಿನ ಪಂದ್ಯ: ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್ ಆಯ್ಕೆ, ಆವೇಶ್ ಖಾನ್ ಪದಾರ್ಪಣೆ
ಟಾಸ್ ಗೆದ್ದ ವಿಂಡೀಸ್
Published On :

ಕ್ವೀನ್ಸ್ ಪಾರ್ಕ್ ಓವಲ್: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತದ ಪರ ಆವೇಶ್ ಖಾನ್ ಪದಾರ್ಪಣೆ ಮಾಡಲಿದ್ದಾರೆ.

ಈಗಾಗಲೇ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳಲು ಕಾತುರವಾಗಿ ನಿಂತಿದೆ. ಈ ಮೈದಾನವು ಕಳೆದ ಪಂದ್ಯದಂತೆ ಹೆಚ್ಚು ಬ್ಯಾಟ್ಸ್​ ಮನ್​ ಗಳಿಗೆ ಸಹಾಯಕವಾಗಲಿದ್ದು, ಹೆಚ್ಚು ರನ್ ಗಳ ಸುರಿಮಳೆ ಹರಿಯುವ ನಿರೀಕ್ಷೆಯಿದೆ.

ಇನ್ನು ಈ ಪಂದ್ಯದಲ್ಲಿ ಭಾರತದ ಪರ ಆವೇಶ್ ಖಾನ್ ಪದಾರ್ಪಣೆ ಮಾಡಲಿದ್ದು, ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದೆ. 

ತಂಡಗಳು ಇಂತಿವೆ:
ಭಾರತ

ಶಿಖರ್ ಧವನ್ (ನಾಯಕ), ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಹಲ್, ಮಹಮದ್ ಸಿರಾಜ್, ಆವೇಶ್ ಖಾನ್ (ಪದಾರ್ಪಣೆ)

ವೆಸ್ಟ್ ಇಂಡೀಸ್: 
ಕೆ ಮೇಯರ್ಸ್, ಎಸ್ ಹೋಪ್ (ವಿಕೆಟ್ ಕೀಪರ್), ಎಸ್ ಬ್ರೂಕ್ಸ್, ಎನ್ ಪೂರನ್ (ನಾಯಕ), ಬಿ ಕಿಂಗ್, ಆರ್ ಪೊವೆಲ್, ಆರ್ ಶೆಫರ್ಡ್, ಎ ಹೋಸೇನ್, ಜೆ ಸೀಲ್ಸ್, ಎಚ್ ವಾಲ್ಷ್, ಎ ಜೋಸೆಫ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.