ಮೂರನೇ ಏಕದಿನ ಪಂದ್ಯ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು; ಸರಣಿ ವೈಟ್ ವಾಶ್
ಹರಾರೆ ಸ್ಫೋರ್ಟ್ಸ್ ಕ್ಲಬ್ ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದದಲ್ಲಿ ಭಾರತ ಎದುರಾಳಿ ತಂಡವನ್ನು 13 ತನ್ ಗಳಿಂದ ಸೋಲಿಸಿದ್ದು, ಸರಣಿಯನ್ನು 3-0 ಅಂತರದಿಂದ ವೈಟ್ ವಾಶ್ ಮಾಡಿದೆ.

ಹರಾರೆ ಸ್ಫೋರ್ಟ್ಸ್ ಕ್ಲಬ್ ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದದಲ್ಲಿ ಭಾರತ ಎದುರಾಳಿ ತಂಡವನ್ನು 13 ತನ್ ಗಳಿಂದ ಸೋಲಿಸಿದ್ದು, ಸರಣಿಯನ್ನು 3-0 ಅಂತರದಿಂದ ವೈಟ್ ವಾಶ್ ಮಾಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಪರ ಆರಂಭಿಕ ಆಟಗಾರರಾದ ಶಿಖರ್ ಧವನ್, 40 ಹಾಗೂ ನಾಯಕ ಕೆಎಲ್ ರಾಹುಲ್ 30 ರನ್ ಗಳಿಸುವುದರೊಂದಿಗೆ ಉತ್ತಮ ಅಡಿಪಾಯ ಹಾಕಿದರು. ತಂಡದ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಅಬ್ಬರದ ಬ್ಯಾಟಿಂಗ್ ನ ಪರಿಣಾಮ ಆಕರ್ಷಕ 130 ರನ್, ನೆರವಿನಿಂದ ಭಾರತ 289 ರನ್ ಗಳಿಸಿ, ಪಂದ್ಯ ಗೆಲ್ಲಲು ಜಿಂಬಾಬ್ವೆಗೆ 290 ರನ್ ಗಳ ಗುರಿ ನೀಡಿತ್ತು.
ಭಾರತದ ರನ್ ಗುರಿಯನ್ನು ಎದುರಿಸಲು ಮುಂದಾದ ಜಿಂಬಾಂಬ್ವೆ ಪರ ಆರಂಭಿಕ ಆಟಗಾರರು ಎಡವಿದರು, ಆದರೆ ಮಧ್ಯಮ ಕ್ರಮಾಂಕದ ಆಟಗಾರ ಸಿಕಂದರ್ ರಾಜಾ 115 ರನ್ ಗಳ ಮೂಲಕ ಗೆಲುವಿನ ಸನಿಹಕ್ಕೆ ಕೊಂಡೊಯ್ದರು ಆದರೆ ಉತ್ತಮ ಜೊತೆಯಾಟದ ವೈಫಲ್ಯದಿಂದ ಜಿಂಬಾಂಬ್ವೆ 49.3 ಓವರ್ ಗಳಿಗೆ 276 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


