ತಂಡದ ಆಯ್ಕೆಗೂ ಒಂದೂವರೆ ಗಂಟೆ ಮುಂಚೆ ನನಗೆ ತಿಳಿಸಿದ್ರು: ನಾಯಕತ್ವದಿಂದ ಕಿತ್ತು ಹಾಕಿದ ಬಗ್ಗೆ ಕೊಹ್ಲಿ ಹೇಳಿದ್ದು!
ಟೀಂ ಇಂಡಿಯಾದ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿದ ನಂತರ ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ ಆಯ್ಕೆ ಸಮಿತಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಟೀಂ ಇಂಡಿಯಾದ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿದ ನಂತರ ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ ಆಯ್ಕೆ ಸಮಿತಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಮೊದಲು ತಮ್ಮ ಮತ್ತು ಆಯ್ಕೆಗಾರರ ನಡುವೆ ಯಾವುದೇ ಪೂರ್ವ ಸಂವಹನ ಇರಲಿಲ್ಲ. ರೋಹಿತ್ ಶರ್ಮಾ ಅವರನ್ನು ಕಳೆದ ವಾರ ಭಾರತದ ನೂತನ ಏಕದಿನ ನಾಯಕರನ್ನಾಗಿ ನೇಮಿಸಲಾಯಿತು ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಸಿದ್ಧವಾಗುತ್ತಿದ್ದಂತೆ ಕೊಹ್ಲಿಯಿಂದ ಅಧಿಕಾರ ವಹಿಸಿಕೊಂಡರು.
ಟೆಸ್ಟ್ ಸರಣಿಗಾಗಿ 8ರಂದು ನಡೆಯುವ ಆಯ್ಕೆ ಸಭೆಗೂ ಒಂದೂವರೆ ಗಂಟೆ ಮೊದಲು ನನ್ನನ್ನು ಸಂಪರ್ಕಿಸಲಾಗಿತ್ತು. T20I ನಾಯಕತ್ವಕ್ಕೆ ರಾಜಿನಾಮೆ ನಿರ್ಧಾರವನ್ನು ಘೋಷಿಸಿದ ನಂತರ ಡಿಸೆಂಬರ್ 8ರವರೆಗೆ ನನ್ನೊಂದಿಗೆ ಯಾವುದೇ ಪೂರ್ವ ಸಂವಹನ ಇರಲಿಲ್ಲ. ಮುಖ್ಯ ಆಯ್ಕೆದಾರರು ಟೆಸ್ಟ್ ತಂಡವನ್ನು ಚರ್ಚಿಸಿದರು. ಅದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ಆದರೆ ಕರೆಯ ಕೊನೆಯಲ್ಲಿ ಐವರು ಆಯ್ಕೆಗಾರರು ನಾನು ಏಕದಿನ ನಾಯಕನಾಗುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಅದಕ್ಕೆ ನಾನು 'ಸರಿ' ಎಂದು ಉತ್ತರಿಸಿದೆ ಎಂದು ಅವರು ಹೇಳಿದರು.
ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


