ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿಗೆ 54 ರನ್ ಭರ್ಜರಿ ಜಯ!
ದುಬೈ ನಲ್ಲಿ ನಡೆದ ಐಪಿಎಲ್-2021 ರ ಮುಂಬೈ ಇಂಡಿಯನ್ಸ್, ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಜಯ ಒಲಿದಿದೆ.

ದುಬೈ: ದುಬೈ ನಲ್ಲಿ ನಡೆದ ಐಪಿಎಲ್-2021 ರ ಮುಂಬೈ ಇಂಡಿಯನ್ಸ್, ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಜಯ ಒಲಿದಿದೆ.
ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಆರ್ ಸಿಬಿ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 165 ರನ್ ಗಳಿಗೆ ಸೀಮಿತಗೊಳಿಸಿತು.
ಆರ್ ಸಿಬಿ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 51 ರನ್ ಗಳಿಸಿದರೆ, ದೇವದತ್ ಪಡಿಕಲ್ 4 ಎಸೆತ ಎದುರಿಸಿ ರನ್ ಗಳಿಸದೇ ನಿರ್ಗಮಿಸಿದರು. ಆದರೆ ನಂತರ ಕ್ರೀಸ್ ಗೆ ಬಂದ ಬ್ಯಾಟ್ಸ್ಮನ್ ಶ್ರೀಕರ್ ಭರತ್ 24 ಎಸೆತಗಳಲ್ಲಿ 32 ರನ್ ಗಳಿಸಿ ಚಹಾರ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು.
ನಂತರ ಗ್ಲೆನ್ ಮ್ಯಾಕ್ಸ್‌ವೆಲ್ 37 ಎಸೆತಗಳಲ್ಲಿ 56 ರನ್ ಗಳನ್ನು ಗಳಿಸಿ ತಂಡಕ್ಕೆ ನೆರವಾದರು.
ಆರ್ ಸಿಬಿ ನೀಡಿದ್ದ ರನ್ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ, ಸಾಧಾರಣವಾದ ಆರಂಭವನ್ನೇನೋ ಪಡೆಯಿತಾದರೂ ಮಧ್ಯಮ ಕೆಳಕ್ರಮಾಂಕದ ಬ್ಯಾಟ್ಸ್ಮನ್ ಗಳು ಎಡವಿದ ಪರಿಣಾಮ ಸೋಲು ಕಂಡಿತು. ರೋಹಿತ್ ಶರ್ಮಾ 28 ಎಸೆತಗಳಲ್ಲಿ 43 ರನ್ ಗಳನ್ನು ಗಳಿಸಿದರೆ, ಕ್ವಿಂಟನ್ ಡಿಕಾಕ್ 23 ಎಸೆತಗಳಲ್ಲಿ 24 ರನ್ ಗಳಿಸಿದರು. ಉಳಿದಂತೆ ಯಾವುದೇ ಬ್ಯಾಟ್ಸ್ಮನ್ ಗಳು ಎರಡು ಅಂಕಿ ರನ್ ಗಳಿಸುವಲ್ಲೂ ವಿಫಲರಾದ ಪರಿಣಾಮ ಆರ್ ಸಿಬಿ ಗೆಲುವು ಸುಲಭವಾಯಿತು.
ಆರ್ ಸಿಬಿ ಪರ ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ಭರ್ಜರಿಯಾಗಿ ಕೆಲಸ ಮಾಡಿತು, 11 ರನ್ ನೀಡಿ 1 ಮೇಡಿನ್ ಓವರ್ ಹಾಗೂ 3 ವಿಕೆಟ್ ಗಳಿಸಿ ಚಹಾಲ್ ಅತ್ಯುತ್ತಮ ಬೌಲರ್ ಎನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


