ಕ್ರಿಕೆಟ್

T20 WC; ಸೆಮಿಫೈನಲ್ ರೇಸ್! ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯ, ಸೋತರೆ ಟೀಂ ಇಂಡಿಯಾ ಔಟ್?

ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಘಟ್ಟ ರೋಚಕ ಹಂತಕ್ಕೆ ಬಂದು ತಲುಪಿದೆ. ಇವತ್ತು ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯಲಿದ್ದು, ಎಲ್ಲರ ಗಮನ ಕೇಂದ್ರಿಕರಿಸಿದೆ.

T20 WC; ಸೆಮಿಫೈನಲ್ ರೇಸ್! ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯ, ಸೋತರೆ ಟೀಂ ಇಂಡಿಯಾ ಔಟ್?
ಟೀಂ ಇಂಡಿಯಾ
Published On :

ದುಬೈ: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಘಟ್ಟ ರೋಚಕ ಹಂತಕ್ಕೆ ಬಂದು ತಲುಪಿದೆ. ಇವತ್ತು ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯಲಿದ್ದು, ಎಲ್ಲರ ಗಮನ ಕೇಂದ್ರಿಕರಿಸಿದೆ. 

ಈಗಾಗಲೇ ಎರಡೂ ಟೀಮ್ ಗಳು ತಮ್ಮ ಮೊದಲ ಪಂದ್ಯಗಳನ್ನು ಪಾಕ್ ನೊಂದಿಗೆ ಸೋತಿವೆ. ಹೀಗಾಗಿ, ಇಂದು ಸಂಜೆ ನಡೆಯಲಿರುವ ಮ್ಯಾಚ್ ಅತ್ಯಂತ ಕುತೂಹಲ ಕೆರಳಿಸಿದೆ. ಅಲ್ಲದೆ, ಭಾರತದ ಪಾಲಿಗೆ ಈ ಪಂದ್ಯ ನಿರ್ಣಾಯಕವೇ? ಕೊಹ್ಲಿ ಪಡೆಯ ಸೆಮಿ ಫೈನಲ್ ಹಾದಿ ಹೇಗಿರಲಿದೆ ಅನ್ನೋದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಗ್ರೂಪ್ 2ರಲ್ಲಿ ಟೀಂ ಇಂಡಿಯಾದ ಸ್ಥಿತಿ!
ಸೂಪರ್ 12ರ ಘಟ್ಟದ 2ನೇ ಗುಂಪಿನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳಿವೆ. ಈ ಗುಂಪಿನಲ್ಲಿ ಸತತ 3 ಪಂದ್ಯಗಳನ್ನು ಗೆದ್ದು ಪಾಕಿಸ್ತಾನ 6 ಅಂಕಗಳೊಂದಿಗೆ ನಂಬರ್-1 ಸ್ಥಾನದಲ್ಲಿದೆ. 

ಅಫ್ಘಾನಿಸ್ತಾನ ತಂಡ 1 ಗೆಲುವು ಮತ್ತು 1 ಸೋಲಿನೊಂದಿಗೆ 2 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ನಮೀಬಿಯಾ 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಭಾರತ ಹಾಗೂ ಸ್ಕಾಟ್ಲೆಂಡ್ ಇನ್ನೂ ತಮ್ಮ ಖಾತೆ ತೆರೆದಿಲ್ಲ. ಉತ್ತಮ ರನ್ ರೇಟ್ ಆಧಾರದ ಮೇಲೆ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಇನ್ನು ಭಾರತ 5 ಹಾಗೂ ಸ್ಕಾಟ್ಲೆಂಡ್ 6ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.