ಟಿ-20 ವಿಶ್ವಕಪ್: ಟಾಸ್ ಗೆದ್ದವರೆ ಬಾಸ್! ಕಿವೀಸ್- ಇಂಡಿಯಾ ಪಂದ್ಯದಲ್ಲಿ ಟಾಸ್ ನಿರ್ಣಾಯಕ
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನು ಮೂರೇ ದಿನಗಳು ಬಾಕಿ ಇವೆ. ಈ ಮಧ್ಯೆ, ಟೀಮ್ ಇಂಡಿಯಾ ಪಡೆಗೆ ಅಧಿಕ ಸಮಯಾವಕಾಶ ಸಿಕ್ಕಿದ್ದು, ನೆಟ್ ಅಭ್ಯಾಸದಲ್ಲಿ ಹೆಚ್ಚು ನಿರತರಾಗಿದ್ದಾರೆ. ಅಕ್ಟೋಬರ್ 31ರಂದು ನಡೆಯಲಿರುವ ಕಿವೀಸ್, ಭಾರತದ ಪಂದ್ಯದಲ್ಲಿ ಟಾಸ್ ಹೆಚ್ಚು ನಿರ್ಣಾಯಕವಾಗಲಿದೆ.

ದುಬೈ: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನು ಮೂರೇ ದಿನಗಳು ಬಾಕಿ ಇವೆ. ಈ ಮಧ್ಯೆ, ಟೀಮ್ ಇಂಡಿಯಾ ಪಡೆಗೆ ಅಧಿಕ ಸಮಯಾವಕಾಶ ಸಿಕ್ಕಿದ್ದು, ನೆಟ್ ಅಭ್ಯಾಸದಲ್ಲಿ ಹೆಚ್ಚು ನಿರತರಾಗಿದ್ದಾರೆ. ಅಕ್ಟೋಬರ್ 31ರಂದು ನಡೆಯಲಿರುವ ಕಿವೀಸ್, ಭಾರತದ ಪಂದ್ಯದಲ್ಲಿ ಟಾಸ್ ಹೆಚ್ಚು ನಿರ್ಣಾಯಕವಾಗಲಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಕ್ಕೂ ನೆರವಾಗಲಿದೆ. ನಿಧಾನಗತಿ ಬೌಲಿಂಗ್ ಗೆ ಹೆಚ್ಚು ಪ್ರಶಸ್ತವಾಗಿರುವ ಪಿಚ್ ನಲ್ಲಿ ನಂತರ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭದಾಯಕವಾಗಲಿದೆ ಅಂತಾ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟಿ-20 ವಿಶ್ವಕಪ್ ನ ಈವರೆಗಿನ ಟೂರ್ನಿಯಲ್ಲಿ ಸೋಲು-ಗೆಲುವಿನ ಬಗ್ಗೆ ಲೆಕ್ಕಾಚಾರ ಹಾಕೋದಾದ್ರೆ ಮೊದಲು ಫಿಲ್ಡಿಂಗ್ ಆಯ್ದುಕೊಳ್ಳುವ ತಂಡಗಳು ಹೆಚ್ಚು ಗೆಲುವು ಸಾಧಿಸಿವೆ.
ಟಿ-20 ವಿಶ್ವಕಪ್ ನ ಸೂಪರ್-12ರ ಹಂತದಲ್ಲಿ ಇಲ್ಲಿವರೆಗೆ 9 ಪಂದ್ಯಗಳು ನಡೆದಿವೆ. ಅದರಲ್ಲಿ ಪ್ರಮುಖವಾಗಿ ನಂತರ ಬ್ಯಾಟಿಂಗ್ ಮಾಡಿದ 8 ತಂಡಗಳು ವಿಜಯ ಶಾಲಿಯಾಗಿವೆ. ಅಲ್ಲದೆ, ಈ ಟೂರ್ನಿಯ 7 ಪಂದ್ಯಗಳಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡ ಗೆಲುವು ಪಡೆದಿವೆ.
ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ಮಧ್ಯೆ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ತಂಡ ಸೋಲು ಅನುಭವಿಸಬೇಕಾಯಿತು. ಆದರೆ, ಈ ನಿಯಮಕ್ಕೆ ವಿರುದ್ಧವಾಗಿರುವ ಮ್ಯಾಚ್ ಅಂದರೆ ಅಫ್ಘಾನಿಸ್ತಾನ ಹಾಗೂ ಸ್ಕಾಟ್ ಲ್ಯಾಂಡ್ ನಡುವಿನ ಪಂದ್ಯ. ಈ ಮ್ಯಾಚ್ ನಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ಮೂಲಕ 190 ರನ್ ಸಿಡಿಸಿ ಗೆಲುವು ಪಡೆದುಕೊಂಡಿತ್ತು.
Related Article
ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿ ಪಡೆಗೆ ಗುಡ್ ನ್ಯೂಸ್! ನೆಟ್ ನಲ್ಲಿ ಪಾಂಡ್ಯಾ ಬೌಲಿಂಗ್-ಬ್ಯಾಟಿಂಗ್ ಅಭ್ಯಾಸ
4 ಕ್ರಿಕೆಟಿಗರಿಗೆ ಕೋವಿಡ್ ಸೋಂಕು: ಟಿ20 ತಂಡದಿಂದ ಹೊರಕ್ಕೆ!
ಟಿ20 ವಿಶ್ವಕಪ್: ಲಾಸ್ಟ್ ಬಾಲ್ ಸಿಕ್ಸ್! ಸ್ಕಾಟ್ಲೆಂಡ್ ವಿರುದ್ಧ ಗೆಲುವಿನ ಖಾತೆ ತೆರೆದ ನಮೀಬಿಯ
T20 WC: ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡ ಪಾಕ್! ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಸುಗಮ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


