ಟಿ20 ವಿಶ್ವಕಪ್: ಭಾರತ-ಪಾಕ್ ಪಂದ್ಯ ನೋಡಲು ಹೋಗಿದ್ದ ಪಾಕ್ ಸಚಿವ ದಿಢೀರ್ ವಾಪಸ್ಸಾಗಿದ್ದೇಕೆ?
ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯ ನೋಡಲೇಬೇಕು ಅಂತಾ ದುಬೈಗೆ ಹೋಗಿದ್ದ ಸಚಿವರೊಬ್ಬರು ವಾಪಸ್ ಆಗಿರುವ ಅಚ್ಚರಿ ವಿಚಾರ ಹೊರಬಿದ್ದಿದೆ.

ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯ ನೋಡಲೇಬೇಕು ಅಂತಾ ದುಬೈಗೆ ಹೋಗಿದ್ದ ಸಚಿವರೊಬ್ಬರು ವಾಪಸ್ ಆಗಿರುವ ಅಚ್ಚರಿ ವಿಚಾರ ಹೊರಬಿದ್ದಿದೆ.
ಪಾಕಿಸ್ತಾನದ ಗೃಹ ಸಚಿವ ಶೇಕ್ ರಶೀದ್ ಪಾಲಿಟಿಕ್ಸ್ ನಲ್ಲಿ ಅಷ್ಟೇ ಜನಪ್ರಿಯ ಆಗಿರೋ ಈ ಪಾಕಿಸ್ತಾನದ ಸಚಿವ ಕ್ರಿಕೆಟ್ ಅಭಿಮಾನಿ ಕೂಡ ಹೌದು. ಭಾರತದ ಮೇಲೆ ದಾಳಿ ಮಾಡುತ್ತೇವೆ. ಅಣು ಬಾಂಬ್ ನಿಂದ ಮ್ಯಾಪ್ ನಲ್ಲಿ ಇಂಡಿಯಾ ಇಲ್ಲದಂತೆ ಮಾಡುತ್ತೇವೆ ಅಂತಾ ಹೇಳಿಕೆ ಕೊಡೋದರ ಮೂಲಕ ಭಾರತದ ಮಾಧ್ಯಮಗಳಲ್ಲಿ ಶೇಖ್ ರಶೀದ್ ಹೆಚ್ಚು ಸುದ್ದಿಯಾಗಿರುತ್ತಾರೆ.
ಈ ಮಧ್ಯೆ ಟೀಂ ಇಂಡಿಯಾ ಹಾಗೂ ಪಾಕ್ ಮಧ್ಯದ ಪಂದ್ಯ ಕಣ್ತುಂಬಿಕೊಳ್ಳಲು ಅಂತಾ ಶೇಕ್ ರಶೀದ್ 2 ದಿನಗಳ ಮೊದಲೇ ದುಬೈಗೆ ಹೋಗಿದ್ದರು. ಆದರೆ ಅವರಿಗೆ ವಿಶ್ವದ ಬ್ಲಾಕ್ ಬಸ್ಟರ್ ಪಂದ್ಯ ನೋಡುವ ಅವಕಾಶ ಇಲ್ಲದಂತಾಗಿದೆ. ಅದಕ್ಕೆ ಕಾರಣ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್.
ವಿರೋಧ ಪಕ್ಷಗಳು ಮತ್ತು ನಿಷೇಧಿತ ಸಂಘಟನೆಯು ದೇಶದ ಬಹು ನಗರಗಳಲ್ಲಿ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದ್ದು, ಇದರ ಪರಿಣಾಮವಾಗಿ ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿ ಭಾಗಶಃ ಸ್ಥಗಿತಗೊಂಡಿವೆ.
ಪಾಕಿಸ್ತಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ದೇಶಕ್ಕೆ ಹಿಂತಿರುಗುವಂತೆ ಪ್ರಧಾನಿ ಆಂತರಿಕ ಸಚಿವರನ್ನು ಒತ್ತಾಯಿಸಿದ್ದು ದೇಶದಲ್ಲಿ ನಡೆಯುತ್ತಿರುವ ಭದ್ರತಾ ಪರಿಸ್ಥಿತಿಯನ್ನು ನಿಭಾಯಿಸಲು ಇಮ್ರಾನ್ ಖಾನ್ ಕರೆ ಮಾಡಿ ಸ್ವದೇಶಕ್ಕೆ ಮರಳುವಂತೆ ಸೂಚಿಸಿದ್ದರು. ಇದ್ದರಿಂದ ಸಚಿವರು ಇಂದು ಶಾರ್ಜಾದಿಂದ ಏರ್‌ಬ್ಲೂ ವಿಮಾನ ಪಿಎ-213 ಮೂಲಕ ಇಸ್ಲಾಮಾಬಾದ್‌ಗೆ ಮರಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


