ಕ್ರಿಕೆಟ್

ಟಿ-20 ವರ್ಲ್ಡ್ ಕಪ್: ವಿರಾಟ್ ಕೊಹ್ಲಿ ಪಡೆಗೆ ಹೊಸ ಜೆರ್ಸಿ ಅನಾವರಣ!

ಇನ್ನು ಕೆಲವೇ ದಿನಗಳಲ್ಲಿ ಟಿ-20 ವರ್ಲ್ಡ್ ಕಪ್ ಆರಂಭಗೊಳ್ಳಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24ರಂದು ಮೊದಲ ಪಂದ್ಯವನ್ನು ಭಾರತ ಆಡಲಿದೆ.

ಟಿ-20 ವರ್ಲ್ಡ್ ಕಪ್: ವಿರಾಟ್ ಕೊಹ್ಲಿ ಪಡೆಗೆ ಹೊಸ ಜೆರ್ಸಿ ಅನಾವರಣ!
ಹೊಸ ಜೆರ್ಸಿ ಅನಾವರಣಗೊಳಿಸಿದ ಟೀಂ ಇಂಡಿಯಾ ಆಟಗಾರರು
Published On :

ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಟಿ-20 ವರ್ಲ್ಡ್ ಕಪ್ ಆರಂಭಗೊಳ್ಳಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24ರಂದು ಮೊದಲ ಪಂದ್ಯವನ್ನು ಭಾರತ ಆಡಲಿದೆ.

ಯುಎಇ ಹಾಗೂ ಓಮನ್ ರಾಷ್ಟ್ರಗಳಲ್ಲಿ ಈ ಹೊಡಿಬಡಿ ಪಂದ್ಯಗಳು ನಡೆಯಲಿದ್ದು, ಬ್ಲ್ಯೂ ಬಾಯ್ಸ್ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಪಡೆ ವಿಶೇಷ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಇಂದು ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.

ಇದು ಹಳೆಯ ಜೆರ್ಸಿಗಿಂತ ಸ್ವಲ್ಪ ಭಿನ್ನವಾಗಿದೆ. ನೂತನ ಜೆರ್ಸಿ ಕೂಡ ಕಡು ನೀಲಿಯಿಂದ ಕೂಡಿದ್ದು, ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಮಧ್ಯ ಭಾಗದಲ್ಲಿ ತಿಳಿ ನೀಲಿ ಪಟ್ಟಿಯನ್ನೂ ನೀಡಲಾಗಿದೆ. ಅಲ್ಲದೆ, ಹಳೆಯ ಬಟ್ಟೆಯಲ್ಲಿ ಭುಜದ ಮೇಲೆ ತ್ರಿವರ್ಣ ಇತ್ತು. ಆದ್ರೆ ನೂತನ ಜರ್ಸಿಯಲ್ಲಿ ಅದು ಇಲ್ಲ. ಈ ಬಾರಿಯ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ, ಗ್ರೂಪ್ ಬಿನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ನ್ಯೂಜಿಲೆಂಡ್, ಆಫ್ಘಾನಿಸ್ತಾನ ಜತೆಗೆ ಇನ್ನೆರಡು ಅರ್ಹತಾ ಸುತ್ತಿನ ವಿಜೇತ ತಂಡಗಳು ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಅಕ್ಟೋಬರ್ 24ರಂದು ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಿದ್ರೆ, ಅ.31ರಂದು ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಪಡೆ ಸೆಣಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.