ಟಿ-20 ವಿಶ್ವಕಪ್ ಫೈನಲ್ ನಲ್ಲಿ ಸೋತ ನಂತರ ಜೈಪುರಕ್ಕೆ ಬಂದಿಳಿದ ನ್ಯೂಜಿಲೆಂಡ್ ತಂಡ
ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತ ನಂತರ ನ್ಯೂಜಿಲೆಂಡ್ ತಂಡ ಚಾರ್ಟರ್ ವಿಮಾನವೊಂದರಲ್ಲಿ ರಾಜಸ್ಥಾನದ ಜೈಪುರಕ್ಕೆ ಇಂದು ಬಂದಿಳಿತು.

ಜೈಪುರ: ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತ ನಂತರ ನ್ಯೂಜಿಲೆಂಡ್ ತಂಡ ಚಾರ್ಟರ್ ವಿಮಾನವೊಂದರಲ್ಲಿ ರಾಜಸ್ಥಾನದ ಜೈಪುರಕ್ಕೆ ಇಂದು ಬಂದಿಳಿತು.
ಬಯೋ ಬಬಲ್ ನಿಂದ ಬಬಲ್ ಗೆ ವರ್ಗಾವಣೆಯಾಗುತ್ತಿರುವುದರಿಂದ ಕಿವೀಸ್ ತಂಡ ಬುಧವಾರ ಆತಿಥೇಯ ಭಾರತ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೂ ಮುನ್ನ ಕ್ವಾರಂಟೈನ್ ಗೆ ಒಳಪಡುತ್ತಿಲ್ಲ.
ನ್ಯೂಜಿಲೆಂಡ್ ತಂಡ ಸೋಮವಾರ ಸಂಜೆ ಜೈಪುರಕ್ಕೆ ಬಂದಿಳಿಯಿತು. ಅವರು ನಾಳೆ ಅಭ್ಯಾಸದಲ್ಲಿ ಪಾಲ್ಗೊಳ್ಳುವ ಮುನ್ನ ಶಿಷ್ಟಾಚಾರದ ಪ್ರಕಾರ ಪರೀಕ್ಷೆ ನಡೆಸಲಾಗುವುದು ಎಂದು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಬುಧವಾರ, ಶುಕ್ರವಾರ ಹಾಗೂ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಭಾರತ ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ನಂತರ ಉಭಯ ತಂಡಗಳು ಎರಡು ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


