ಕ್ರಿಕೆಟ್

ಮಧ್ಯದಲ್ಲೇ ಐಪಿಎಲ್ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಯೋಜನೆಗೆ ತಣ್ಣೀರು!

ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮಧ್ಯದಲ್ಲಿ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಆಸೆಗೆ ಪೆಟ್ಟು ಬಿದ್ದಿದೆ.

ಮಧ್ಯದಲ್ಲೇ ಐಪಿಎಲ್ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಯೋಜನೆಗೆ ತಣ್ಣೀರು!
ಆರ್ಸಿಬಿ
Published On :

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮಧ್ಯದಲ್ಲಿ ತೊರೆದು ತವರಿಗೆ ಹಾರಲು ಮುಂದಾಗಿದ್ದ ಆಸ್ಟ್ರೇಲಿಯಾ ಆಟಗಾರರ ಆಸೆಗೆ ಪೆಟ್ಟು ಬಿದ್ದಿದೆ. 

ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ಆಟಗಾರರನ್ನು ಕರಿಸಿಕೊಳ್ಳಲು ವಿಶೇಷ ವಿಮಾನಗಳ ಯೋಜನೆ ಮಾಡಿಲ್ಲ. ಇನ್ನು ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಹಿನ್ನೆಲೆ ಆಸ್ಟ್ರೇಲಿಯಾ ಮೇ 15ರವರೆಗೆ ಭಾರತದಿಂದ ಬರುವ ಎಲ್ಲ ವಿಮಾನಗಳನ್ನು ರದ್ದು ಮಾಡಿದೆ.

'ಸದ್ಯ ಯಾವುದೇ ವಿಶೇಷ ವಿಮಾನಗಳನ್ನು ಓಡಿಸುವ ಯೋಜನೆ ಇಲ್ಲ. ನಾವು ಬಿಸಿಸಿಐ ಹಾಗೂ ಆಟಗಾರರೊಂದಿಗೆ ಸತತ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದೇವೆ' ಎಂದು ಸಿಎ ಮಧ್ಯಂತರ ಸಿಇಒ ನಿಕ್ ಹಾಕ್ಲಿ ತಿಳಿಸಿದ್ದಾರೆ.

'ಬಿಸಿಸಿಐ ನಿರ್ಮಿಸಿದ ಬಯೊ-ಬಬಲ್ ವ್ಯವಸ್ಥೆಯಲ್ಲಿ ಆಟಗಾರರು ಆರೋಗ್ಯವಾಗಿದ್ದಾರೆ. ನಾವು ಮಾತನಾಡಿದ ಆಟಗಾರರು ತಮ್ಮ ಕ್ರೀಡಾ ಬದ್ಧತೆಯನ್ನು ಮೆರೆದಿದ್ದಾರೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ' ಎಂದು ಹಾಕ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.