ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾಗೆ 5,000 ರೂ. ದಂಡ!
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಗೋವಾದ ಗ್ರಾಮವೊಂದರ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದಾರೆ.

ಪಣಜಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಗೋವಾದ ಗ್ರಾಮವೊಂದರ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದಾರೆ.
ಈ ಪ್ರಮಾದಕ್ಕಾಗಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಆದೇಶದಂತೆ 5,000 ರೂ. ದಂಡ ಪಾವತಿಸಿದ್ದಾರೆ. ಗೋವಾದ ಉತ್ತರ ಪ್ರಾಂತ್ಯದ ಅಲ್ಡೋನಾದಲ್ಲಿ ಅಜಯ್ ಜಡೇಜಾ ನಿವಾಸವಿದೆ.
ಲೇಖಕ ಅಮಿತ್ ಘೋಷ್ ಸೇರಿದಂತೆ ಹಲವಾರು ಗಣ್ಯರು ಅಲ್ಲಿ ವಾಸಿಸುತ್ತಿದ್ದಾರೆ. ಗೋವಾ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತದೆ. ಜಡೇಜಾ ವಾಸಿಸುವ ಗ್ರಾಮದ ಸಮೀಪದಲ್ಲಿರುವ ನಾಚಿನೋಲಾದಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಕಸ ಯಾವ ವ್ಯಕ್ತಿಗೆ ಸೇರಿದ್ದು ಎಂಬುದನ್ನು ಕಂಡುಕೊಂಡು ಅವರ ಮೇಲೆ ದಂಡ ವಿಧಿಸಲಾಗುತ್ತದೆ.
ಕಸದ ಸಮಸ್ಯೆಯಿಂದ ನಮ್ಮ ಗ್ರಾಮ ತತ್ತರಿಸಿ ಹೋಗಿದ್ದು, ಹೊರಗಿನಿಂದ ತಂದ ಕಸವನ್ನು ಇಲ್ಲಿ ಎಸೆಯಲಾಗುತ್ತದೆ. ಆ ಕಸದ ಚೀಲಗಳು ಯಾರದ್ದು ಎಂಬುದನ್ನು ಪತ್ತೆ ಹಚ್ಚಲು ನಾವು ಕೆಲವು ಯುವಕರನ್ನು ನೇಮಿಸಿಕೊಂಡಿದ್ದೇವೆ. ಕಸದ ಚೀಲವೊಂದರ ಮೇಲೆ ಅಜಯ್ ಜಡೇಜಾ ಅವರ ಹೆಸರು ಕಾಣಿಸಿಕೊಂಡಿತು. ಮುಂದೆ ಇಲ್ಲಿ ಕಸವನ್ನು ವಿಲೇವಾರಿ ಮಾಡಬೇಡಿ ಎಂದು ನಾವು ಅವರಿಗೆ ಸಲಹೆ ನೀಡಿದ್ದೇವೆ ಎಂದರು.
ನಮ್ಮ ಷರತ್ತುಗಳ ಅನ್ವಯ ಯಾವುದೇ ತಗಾದೆ ತೆಗೆಯದೆ ಅವರು ದಂಡ ಪಾವತಿಸಿದ್ದಾರೆ. ಒಬ್ಬ ಶ್ರೇಷ್ಠ ಕ್ರಿಕೆಟಿಗ ನಮ್ಮ ಪ್ರದೇಶದಲ್ಲಿ ನೆಲೆಸಿರುವುದು ನಮಗೆ ಹೆಮ್ಮೆ. ಆದರೆ ಎಲ್ಲರೂ ಕಸದ ನಿಯಮಗಳನ್ನು ಪಾಲಿಸಬೇಕು 'ಎಂದು ಗ್ರಾಮದ ಸರ್ಪಂಚ್ ತೃಪ್ತಿ ಬಂಡೋದ್ಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


