ಕ್ರಿಕೆಟ್

ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ನಿಧನ: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಂತಾಪ

ವಿಶ್ವಮಹಾಯುದ್ಧ ಸಮಯದಲ್ಲಿ ಎಲೀನ್ ಅವರು ಇಂಗ್ಲೆಂಡ್ ಪರ ಬೇಹುಗಾರಿಕೆಯನ್ನೂ ಮಾಡಿದ್ದರು ಎನ್ನುವುದು ತುಂಬಾ ಅಚ್ಚರಿಯ ಸಂಗತಿ.

ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ನಿಧನ: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಂತಾಪ
ಎಲೀನ್ ಆಶ್
Published On :

ಲಂಡನ್: ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದ ಮಹಿಳೆ ಎಲೀನ್ ಆಶ್ ಇಂಗ್ಲೆಂಡಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 110 ವರ್ಷ ವಯಸ್ಸಾಗಿತ್ತು. 

ಎಲೀನ್ ಅವರು 1937ರಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಆಡುವ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಬಲಗೈ ಬೌಲರ್ ಆಗಿದ್ದ ಎಲೀನ್ ಅವರು 1949ರಂದು ಕ್ರಿಕೆಟ್ ನಿಂದ್ ನಿವೃತ್ತಿ ಹೊಂದಿದ್ದರು. 

ಎರಡನೇ ವಿಶ್ವಮಹಾಯುದ್ಧ ಸಮಯದಲ್ಲಿ ಎಲೀನ್ ಅವರು ಇಂಗ್ಲೆಂಡ್ ಪರ ಬೇಹುಗಾರಿಕೆಯನ್ನೂ ಮಾಡಿದ್ದರು ಎನ್ನುವುದು ತುಂಬಾ ಅಚ್ಚರಿಯ ಸಂಗತಿ. ಅವರ ನಿಧನವಾರ್ತೆಯನ್ನು ಬಹಿರಂಗಪಡಿಸಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅವರಿಗೆ ಗೌರವ ಸೂಚಿಸಲು ನಿರ್ಧರಿಸಿದೆ. 

ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದ ಫ್ರೆಂಚ್ ರೆಸ್ಟಾರೆಂಟೊಂದರಲ್ಲಿ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರನ್ನು ಭೇಟಿ ಮಾಡಿದ್ದ ಎಲೀನ್ ತಮ್ಮ ಬ್ಯಾಟಿಗೆ ಬ್ರಾಡ್ಮನ್ ಅವರ ಹಸ್ತಾಕ್ಷರ ಹಾಕಿಸಿಕೊಂಡಿದ್ದರು. 

Related Article

ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್: 2ನೇ ದಿನದಾಟ ಅಂತ್ಯಕ್ಕೆ ಭಾರತ 69/0, 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾಗೆ 332 ರನ್ ಮುನ್ನಡೆ

62 ರನ್ ಗಳಿಗೆ ಆಲೌಟ್: ನಾಲ್ಕು ಕಳಪೆ ದಾಖಲೆ ಬರೆದ ನ್ಯೂಜಿಲೆಂಡ್!

ವಿರಾಟ್ ನಾಯಕತ್ವದಲ್ಲಿ ಭಾರತ ಸೋಲಿಸುವುದು ಕಷ್ಟ: 7 ವರ್ಷಗಳಲ್ಲಿ ಕೇವಲ 2 ಸೋಲು, 23 ಪಂದ್ಯಗಳಲ್ಲಿ ಗೆಲುವು!

ಐಪಿಎಲ್ 2022: ವಿರಾಟ್ ಕ್ಕಿಂತ ಹೆಚ್ಚು ರೋಹಿತ್; ಸಂಭಾವನೆಯಲ್ಲಿ ಧೋನಿ ಹಿಂದಿಕ್ಕಿದ ಪಂತ್

ಕೆಎಲ್ ರಾಹುಲ್‌ಗೆ 20 ಕೋಟಿ ರೂ. ಆಫರ್ ಕೊಟ್ಟ ಲಖನೌ: ಐಪಿಎಲ್ ಇತಿಹಾಸದಲ್ಲೇ ಇದು ದುಬಾರಿ ಮೊತ್ತ; ಆಗಾದ್ರೆ RCB ಕಥೆ ಏನು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.