ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್: 183ಕ್ಕೆ ಇಂಗ್ಲೆಂಡ್ ಆಲೌಟ್, 162 ರನ್ ಗಳಿಂದ ಹಿಂದಿರುವ ಭಾರತ
ಇಲ್ಲಿನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್ ತಂಡ 183 ರನ್ ಗಳಿಗೆ ಆಲ್ ಔಟ್ ಆಗಿದ್ದು, ಭಾರತ 162 ರನ್ ಗಳಿಂದ ಹಿಂದಿದೆ. ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಕ್ರೀಸ್ ನಲ್ಲಿದ್ದು, ತಲಾ 9 ರನ್ ಗಳಿಸಿದ್ದಾರೆ.

ನಾಟಿಂಗ್ ಹ್ಯಾಮ್: ಇಲ್ಲಿನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್ ತಂಡ 183 ರನ್ ಗಳಿಗೆ ಆಲ್ ಔಟ್ ಆಗಿದ್ದು, ಭಾರತ 162 ರನ್ ಗಳಿಂದ ಹಿಂದಿದೆ. ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಕ್ರೀಸ್ ನಲ್ಲಿದ್ದು, ತಲಾ 9 ರನ್ ಗಳಿಸಿದ್ದಾರೆ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ರೋರಿ ಜೋಸೆಫ್ ಬರ್ನ್ಸ್ ಅವರನ್ನು ಮೊದಲ ಓವರ್ ನಲ್ಲಿಯೇ ಶೂನ್ಯಕ್ಕೆ ಜಸ್ಪ್ರೀತ್ ಬೂಮ್ರಾ ಎಲ್ ಬಿಡಬ್ಲ್ಯೂಬಲೆಗೆ ಕೆಡವಿದರೆ, ಡೊಮ್ಮಿ ಸಿಬ್ಲಿ 18 ರನ್ ಗಳಿಸಿ ಕೆ.ಎಲ್. ರಾಹುಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ಝಾಕ್ ಕ್ರಾಲೀ 27, ರೂಟ್ 64, ಜಾನಿ ಬೇಸ್ಟೋರ್ವ್ 29, ಡನ್ ಲಾರೆನ್ಸ್ ಹಾಗೂ ಜೋಸ್ ಬಟ್ಲರ್ ಶೂನ್ಯಕ್ಕೆ ಔಟಾದರು. ಸ್ಯಾನ್ ಕರನ್ 27, ಸ್ಟುವರ್ಡ್ ಬ್ರಾಡ್ 4, ಜೀಮ್ಸ್ ಅಂಡರ್ಸನ್ ಕೇವಲ 1 ರನ್ ಗಳಿಸಿ ಔಟಾದರು.
ಬೂಮ್ರಾ (46ಕ್ಕೆ 4) ಮತ್ತು ಶಮಿ (28ಕ್ಕೆ 3) ಇವರಿಬ್ಬರ ಆಟಕ್ಕೆ ತತ್ತರಿಸಿದ ಇಂಗ್ಲೆಂಡ್ ತಂಡ 65.4 ಓವರ್ ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆಟ ಆರಂಭಿಸಿದ್ದು, ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


